ಕರ್ನಾಟಕ

karnataka

ETV Bharat / state

ಕೂಲಿ ಕೆಲಸಕ್ಕಾಗಿ ಕರೆದೊಯ್ಯುತ್ತಿದ್ದ 27 ಬಾಲ ಕಾರ್ಮಿಕರ ರಕ್ಷಣೆ

ಸಿರವಾರ ತಹಶೀಲ್ದಾರ್ ಶೃತಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ. ಒಟ್ಟು 27 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಬಾಲಕರನ್ನು ಹಸ್ತಾಂತರಿಸಲಾಗಿದೆ.

27-child-laborers-saved-from-taking-them-to-work
ಕೂಲಿ ಕೆಲಸಕ್ಕಾಗಿ ಕರೆದೊಯ್ಯುತ್ತಿದ್ದ 27 ಬಾಲ ಕಾರ್ಮಿಕರ ರಕ್ಷಣೆ

By

Published : Sep 4, 2020, 7:17 PM IST

ರಾಯಚೂರು:ಹೊಲದಲ್ಲಿ ಕೂಲಿ ಕೆಲಸ ಮಾಡಿಸಲು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 27 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಜಿಲ್ಲೆಯ ಸಿರವಾರ ಪಟ್ಟಣದ ದೇವದುರ್ಗ ಕ್ರಾಸ್, ಮಾನವಿ ಕ್ರಾಸ್ ಹಾಗೂ ಲಿಂಗಸೂಗೂರು ಮುಖ್ಯ ರಸ್ತೆ ಬಳಿ ಗೂಡ್ಸ್ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುವ ವೇಳೆ ದಾಳಿ ಮಾಡಲಾಗಿದೆ.

ಅಧಿಕಾರಿಗಳಿಂದ ಬಾಲ ಕಾರ್ಮಿಕರ ರಕ್ಷಣೆ

ಸಿರವಾರ ತಹಶೀಲ್ದಾರ್ ಶೃತಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ 9 ವಾಹನಗಳನ್ನು ಜಪ್ತಿ ಮಾಡಿ ಸಿರವಾರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಪತ್ತೆಯಾಗಿರುವ ಬಾಲಕಾರ್ಮಿಕರು ದೇವದುರ್ಗ ತಾಲೂಕಿನ ನಾರಬಂಡ, ಬಂಡೆಗುಡ್ಡ, ಸಿರವಾರ ತಾಲೂಕಿನ ಲಕ್ಕಂದಿನ್ನಿ, ಬಲ್ಲಟಗಿ, ಮಾನವಿ ಹಾಗೂ ಸಿರವಾರ ಪಟ್ಟಣದವರಾಗಿದ್ದಾರೆ. ದಾಳಿಯಲ್ಲಿ ಬಾಲಕಾರ್ಮಿಕ ಯೋಜನೆ, ಸಿರವಾರ ತಾಲೂಕಾಡಳಿತ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

ರಕ್ಷಿಸಲಾಗಿರುವ ಬಾಲಕರನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details