ರಾಯಚೂರು:ಬೈಕ್ ಸೈಡ್ ಬ್ಯಾಗ್ನಲ್ಲಿ ಇಟ್ಟಿದ ಸುಮಾರು 2 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಸುಕಲಾಪೇಟೆಯಲ್ಲಿ ನಡೆದಿದೆ.
ವ್ಯಕ್ತಿಯೋರ್ವರು ಅಂಗಡಿಗೆ ಸಲಕರಣೆ ತೆಗೆದುಕೊಂಡು ಬರಲು ಹೋಗಿದ್ದಾನೆ. ಆಗ ತನ್ನ ಕೈಯಲ್ಲಿದ್ದ ಅಂದಾಜು 2 ಲಕ್ಷ ಹಣವನ್ನು ಬೈಕ್ ಸೈಡ್ ಬ್ಯಾಗ್ನಲ್ಲಿ ಇಟ್ಟಿದ್ದಾನೆ. ಹಣ ತೆಗೆದುಕೊಂಡು ಬಂದಿರುವುದನ್ನು ಆರಂಭದಿಂದಲೂ ಗಮನಿಸಿದ ಖದೀಮರು ವ್ಯಕ್ತಿ ಅಂಗಡಿಗೆ ತೆರಳಿದಾಗ ಬೈಕ್ನಲ್ಲಿ ಬಂದು ಹಣವನ್ನು ದೋಚಿದ್ದಾರೆ.