ಮೈಸೂರು :ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಖಾಲಿ ಇದೆ ಎಂದು ಬರುವ ಜಾಹೀರಾತು ನಂಬಿ ಅರ್ಜಿ ಹಾಕುವ ಮುನ್ನ ಈ ಸುದ್ದಿಯನ್ನ ಒಂದು ಸಾರಿ ಯುವತಿಯರು ಓದಲೇಬೇಕು..
ಕಾಲ್ಗರ್ಲ್ ಪಟ್ಟ ಕಟ್ಟುತ್ತಾರೆ ಕಿರಾತಕರು.. ಓದಿ: ಹಾವೇರಿಯ ಶಿವನಂದಿ ಕೊಬ್ಬರಿ ಹೋರಿ ಸಾವು... ಅಂತ್ಯಕ್ರಿಯೆ ನಡೆಸಿ ಪ್ರಾಣಿಪ್ರೇಮ ಮೆರೆದ ಮಾಲೀಕರು
ಮೈಸೂರು ನಗರದ ನಿರುದ್ಯೋಗಿ ಯುವತಿಯೊಬ್ಬಳು ಫೇಸ್ಬುಕ್ ಪೇಜ್‌ನಲ್ಲಿ ಕೆಲಸ ಖಾಲಿ ಇದೆ ಎಂಬ ಲಿಂಕ್‌ನ ಓಪನ್ ಮಾಡಿ ಅಲ್ಲಿ ಕೇಳಿರುವ ಮಾಹಿತಿಗಳು ಫೋಟೋ ಹಾಗೂ ಮೊಬೈಲ್ ನಂಬರ್ ಹಾಕಿದ್ದಾರೆ. ಆದರೆ, ಇವರ ಫೋಟೋ ತೆಗೆದು ವಂಚಕ ಜಾಲತಾಣಗಳಲ್ಲಿ ಯುವತಿ 500 ರೂಪಾಯಿಗೆ ಮಾರಾಟಕ್ಕೆ ಇದ್ದಾಳೆ, ಎಂದು ಅಪ್ಲೋಡ್ ಮಾಡಿದ್ದಾನೆ.
ಜೊತೆಗೆ ಅವಳ ಮೊಬೈಲ್ ನಂಬರ್ ಸಹ ಹಾಕಿದ್ದಾನೆ. ಈಗ ಯುವತಿಗೆ ನಿರಂತರ ಮೊಬೈಲ್ ಕರೆಗಳು ಬರುತ್ತಿವೆ. ಇದರಿಂದ ಮಾನಸಿಕವಾಗಿ ನೊಂದಿರುವ ಯುವತಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾಳೆ.
ಈ ಪ್ರಕರಣದ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ನಗರ ಅಪರಾಧ ಹಾಗೂ ಸಂಚಾರಿ ಡಿಸಿಪಿ ಗೀತಾ ಪ್ರಸನ್ನ ಅ;ರು, ಫೇಸ್ಬುಕ್ನಲ್ಲಿ ಕೆಲಸ ಖಾಲಿ ಇದೆ ಎಂದು ಜಾಹೀರಾತು ಬಂದಿದೆ. ಇದನ್ನ ನೋಡಿದ ಯುವತಿ ತನ್ನ ಎಲ್ಲಾ ವಿವರ ಹಾಗೂ ಫೋಟೋ ಹಾಕಿದ್ದಾಳೆ.
ಆದರೆ, ವಂಚಕ, ಫೋಟೋವನ್ನು ಕೆಟ್ಟದಾಗಿ ಬಳಸಿಕೊಂಡಿದ್ದಾನೆ. ಈ ಬಗ್ಗೆ ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಖಾಲಿ ಇದೆ ಎಂದಾಗ ವೈಯಕ್ತಿಕ ವಿವರಗಳನ್ನು ಹಾಕಬೇಡಿ ಎಂದು ಡಿಸಿಪಿ ಎಚ್ಚರಿಸಿದ್ದಾರೆ.