ಸಿಎಫ್ಟಿಆರ್ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಸಂದರ್ಶನ ಮೈಸೂರು : ಆಗಸ್ಟ್ 3 ಮತ್ತು 4ರಂದು ಪ್ಲಾಸ್ಟಿಕ್ ಬದಲಿಗೆ ಪೇಪರ್ನಿಂದ ಉತ್ಪಾದಿಸಿದ ಫುಡ್ ಪ್ಯಾಕೆಟ್ ಬಳಕೆ ಬಗ್ಗೆ ಸಿಎಫ್ಟಿಆರ್ಐನಲ್ಲಿ ಎರಡು ದಿನಗಳ ಸೆಮಿನಾರ್ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಈ ವರ್ಷ ಸಿರಿ ಧಾನ್ಯಗಳ ವರ್ಷವಾಗಿ ಆಚರಣೆ ಮಾಡಲಾಗುತ್ತಿದ್ದು, ಸಿರಿಧಾನ್ಯಗಳ ಮಹತ್ವ ಹಾಗು ಸಂಸ್ಕರಣೆ ಬಗ್ಗೆ ಸಿಎಫ್ಟಿಆರ್ಐ ಕೈಗೊಂಡಿರುವ ಸಂಶೋಧನೆ ಕುರಿತು ಸಿಎಫ್ಟಿಆರ್ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸಿರಿಧಾನ್ಯಗಳ ಬಳಕೆಯಲ್ಲಿ ಪಾಸ್ಪರಸ್, ಝಿಂಕ್, ಐರನ್, ಕ್ಯಾಲ್ಸಿಯಂ ನಂತಹ ಅಂಶಗಳು ಹೆಚ್ಚಾಗಿರುವುದರಿಂದ ಡಯಾಬಿಟಿಸ್, ಕ್ಯಾನ್ಸರ್ನಂತಹ ಕಾಯಿಲೆಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡಲು ಸಹಕಾರಿಯಾಗಿದೆ. ಸಿರಿಧಾನ್ಯಗಳಲ್ಲಿ ಶುಗರ್ ಅಂಶ ಕಡಿಮೆ ಇದ್ದು, ಗ್ಲೂಕೋಸ್ ಇದೆ. ಅದರಿಂದ ಈ ಪದಾರ್ಥಗಳು ಬೇಗ ಜೀರ್ಣವಾಗುವುದಿಲ್ಲ. ಬ್ಲಡ್ ಗ್ಲೂಕೋಸ್ ಲೆವೆಲ್ ಮೆಂಟೇನ್ ಆಗುತ್ತದೆ. ಡಯಾಬಿಟಿಸ್ ಇರುವವರಿಗೆ ಸಿರಿಧಾನ್ಯಗಳು ಒಳ್ಳೆಯ ಆಹಾರ ಎಂದು ಸಿಎಫ್ಟಿಆರ್ಐನಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಲಾಗುತ್ತಿದೆ ಎಂದು ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ತಿಳಿಸಿದರು.
ಸಿಎಫ್ಟಿಆರ್ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಸಂದರ್ಶನ ಇದನ್ನೂ ಓದಿ :ಕರ್ನಾಟಕದಲ್ಲಿ ಶ್ವಾಸಕೋಶ ಕ್ಯಾನ್ಸರ್ನಿಂದ ಅಧಿಕ ಸಾವು: ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಗೊತ್ತಾ?
ಸಿರಿಧಾನ್ಯಗಳ ಮಹತ್ವ ಏನು? :ಈ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿದೆ. ಭಾರತದಲ್ಲಿ ಪ್ರಪಂಚದ ಶೇಕಡ 90ರಷ್ಟು ಸಿರಿಧಾನ್ಯಗಳ ಉತ್ಪಾದನೆ ಆಗುತ್ತಿದೆ. ಆದರೆ ಇದು ಸ್ಥಳೀಯವಾಗಿ ಮಾತ್ರ ಉಪಯೋಗವಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪುತ್ತಿಲ್ಲ. ಏಕೆಂದರೆ ಸಿರಿಧಾನ್ಯಗಳ ಸಂಸ್ಕರಣೆಗೆ ನಮ್ಮಲ್ಲಿ ತಂತ್ರಜ್ಞಾನ ಅಭಿವೃದ್ಧಿ ಆಗಿಲ್ಲ. ಈ ತಂತ್ರಜ್ಞಾನದ ಅಭಿವೃದ್ಧಿಯ ಕಡೆ ಸಿಎಫ್ಟಿಆರ್ಐ ಕೆಲಸ ಮಾಡುತ್ತಿದೆ. ಈಗಾಗಲೇ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಸಿರಿಧಾನ್ಯಗಳ ಉತ್ಪಾದನೆಗೆ ಪ್ರೋತ್ಸಾಹ ಸಹ ಮಾಡಬೇಕಿದ್ದು, ಅದರ ಕಡೆಗೆ ಸಿಎಫ್ಟಿಆರ್ಐ ಕೆಲಸ ಮಾಡುತ್ತಿದೆ ಎಂದರು.
ಪೇಪರ್ ಪ್ಯಾಕೇಜ್ ತಂತ್ರಜ್ಞಾನ ಬಳಕೆ :ವಿಶ್ವದಲ್ಲಿ ಪ್ರತಿವರ್ಷ 450 ಮಿಲಿಯನ್ ಟನ್ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಬಳಸಿ ಬಿಸಾಡುವ ಪ್ಲಾಸ್ಟಿಕ್ ಎಂದೂ ಬ್ರೇಕ್ ಡೌನ್ ಆಗುವುದಿಲ್ಲ. ಬ್ರೇಕ್ ಅಪ್ ಆಗುತ್ತದೆ. ಪ್ಲಾಸ್ಟಿಕ್ ಶೇಕಡಾ 80ರಷ್ಟು ಪುನರ್ಬಳಕೆ ಆಗುವುದಿಲ್ಲ. ಇದರಿಂದ ಹಲವು ಸಮಸ್ಯೆಗಳು ಉಲ್ಬಣಿಸುತ್ತವೆ. ಇದಕ್ಕೆ ಬದಲಾಗಿ ಪೇಪರ್ನಿಂದ ಫುಡ್ ಪ್ಯಾಕೇಜ್ ಮಾಡುವುದು ಹೇಗೆ ಎಂಬ ಬಗ್ಗೆ ಎರಡು ದಿನದ ಕಾರ್ಯಾಗಾರ ಆಗಸ್ಟ್ 3 ಮತ್ತು 4ರಂದು ಸಿಎಫ್ಟಿಆರ್ಐನಲ್ಲಿ ನಡೆಯಲಿದೆ ಎಂದು ಸಿಎಫ್ಟಿಆರ್ಐ ನಿರ್ದೇಶಕರು ಹೇಳಿದರು.
ಇದನ್ನೂ ಓದಿ :ಮೈಸೂರಿನಲ್ಲಿ ಆಹಾರ ಸಂಶೋಧನೆ ಸಂಭ್ರಮೋತ್ಸವ: ಮುಕ್ತ ಪ್ರವೇಶ ಅವಕಾಶ ಕಲ್ಪಿಸಿರುವ ಸಿಎಫ್ಟಿಆರ್ಐ