ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸಿದರೆ ಒಳ್ಳೆಯದು: ನಟ ಶಿವರಾಜ್ ಕುಮಾರ್ - ETv Bharat kannada news

ಮೈಸೂರು ನಗರದ ವುಡ್​ಲ್ಯಾಂಡ್​​ ಚಿತ್ರ ಮಂದಿರಕ್ಕೆ ವೇದ ಚಿತ್ರ ತಂಡ ಭೇಟಿ - ಎಷ್ಟರ ಮಟ್ಟಿಗೆ ಕೋವಿಡ್ ಹರಡಿದೆ ಅನ್ನೋದು ಗೊತ್ತಿಲ್ಲ - ಆದರೆ ಮಾಸ್ಕ್ ಧರಿಸಿದರೆ ಒಳ್ಳೆಯದು ಎಂದ ಶಿವಣ್ಣ

Actor Shivraj Kumar
ನಟ ಶಿವರಾಜ್ ಕುಮಾರ್

By

Published : Dec 26, 2022, 7:48 PM IST

ಮೈಸೂರು: ಎಷ್ಟರ ಮಟ್ಟಿಗೆ ಕೋವಿಡ್ ಹರಡಿದೆಯೋ ಗೊತ್ತಿಲ್ಲ. ಆದರೆ ನಮ್ಮ ಹುಷಾರಿನಲ್ಲಿ ನಾವಿರಬೇಕು, ಆದ್ದರಿಂದ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಿದರೆ ಒಳ್ಳೆಯದು ಅನಿಸುತ್ತದೆ ಎಂದು ಮೈಸೂರಿನಲ್ಲಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್​​ ಇದ್ದ ಕಾರಣ ಬೆಳೆಗ್ಗಿನ ಸಮಯದಲ್ಲಿ ವೇದ ಚಿತ್ರದ ಪ್ರಮೋಷನ್​ಗಾಗಿ ನಟ ಶಿವರಾಜ್ ಕುಮಾರ್, ಪತ್ನಿ ಹಾಗೂ ಈ ಚಿತ್ರದ ನಿರ್ಮಾಪಕಿ ಆಗಿರುವ ಗೀತಾ ಶಿವರಾಜ್ ಕುಮಾರ್ ಇಂದು ಮೈಸೂರು ನಗರದ ವುಡ್​​ಲ್ಯಾಂಡ್ ಚಿತ್ರ ಮಂದಿರಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ವೇದ ಚಿತ್ರ ತಂಡವೂ ಉಪಸ್ಥಿತವಿತ್ತು.

ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ್, ಸಿನಿಮಾ ಮಂದಿರದಲ್ಲಿ ಮಾಸ್ಕ್ ಕಡ್ಡಾಯ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಎಲ್ಲರೂ ಕೇರ್ ಫುಲ್ ಆಗಿರುವುದು ಒಳ್ಳೆಯದು. ಎಷ್ಟರಮಟ್ಟಿಗೆ ಕೋವಿಡ್ ಇಂದು ಹರಡಿದೆ ಅನ್ನೋದು ಗೊತ್ತಿಲ್ಲ. ಆದರೆ ಈ ಹಿಂದಿನಂತೆ ಕೋವಿಡ್​​ ಅಲೆ ಎಫೆಕ್ಟ್​ ಮಾಡಲ್ಲ ಎಂದರು. ಜನರಿಗೆ ಅವರದೇ ಆದ ಸ್ವಾತಂತ್ರ್ಯ ಇರುತ್ತದೆ. ಎಲ್ಲರ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು ಎಂದರು.

ಸರ್ಕಾರ ಎಲ್ಲದಕ್ಕೂ ಕಡಿವಾಣ ಹಾಕುವುದು ಸರಿಯಲ್ಲ, ನಮ್ಮ ಹುಷಾರಿನಲ್ಲಿ ನಾವು ಇದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ರೀತಿ ಜೀವನದಲ್ಲಿ ಬರುತ್ತಲೇ ಇರುತ್ತವೆ ಎಲ್ಲವನ್ನು ಎದುರಿಸಲು ನಾವು ಸಿದ್ಧವಾಗಿರಬೇಕು. ನಾವು ಸುನಾಮಿ ಬಂದರೂ ಎದುರಿಸಿದ್ದೆವು, ಮೊದಲ ಅಲೆ, ಎರಡನೇ ಅಲೆ, ಮೂರನೇ ಅಲೆ ಬಂತು ಅದನ್ನೂ ನಾವು ಎದುರಿಸಿದ್ದೆವು. ಮುಂದೆ ಯಾವುದೇ ಬಂದರೂ ಎದುರಿಸಲು ಸಿದ್ಧವಿದ್ದು ಮಾಸ್ಕ್ ಧರಿಸಬೇಕು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಹಾಗೂ ಕರ್ನಾಟಕದ ಜನತೆಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬೆಳಗಾವಿ ಗಡಿ ವಿವಾದದ ಬಗ್ಗೆ ಪ್ರಶ್ನೆಯನ್ನು ನಟ ಶಿವರಾಜ್ ಕುಮಾರ್​ ಅವರಿಗೆ ಕೇಳಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಶಿವಣ್ಣ ಸದ್ಯಕ್ಕೆ ಇವಾಗ ಇದೆಲ್ಲಾ ಬೇಡ ಬಿಟ್ಟು ಬಿಡೋಣ ಕೇವಲ ನಮ್ಮ ವೇದ ಚಿತ್ರದ ಬಗ್ಗೆ ಮಾತನಾಡೋಣ ಎಂದು ಗಡಿ ವಿವಾದದ ಪ್ರಶ್ನೆಗೆ ಉತ್ತರಿಸಿಲು ನಿರಕಾರಿಸಿದರು.

ಇದನ್ನೂ ಓದಿ :ಮಂತ್ರಾಲಯಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ

ಶಿವರಾಜ್ ಕುಮಾರ್ ಅಭಿನಯದ 125 ನೇ ವೇದ ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದು, ಈ ಮೂಲಕ ಶಿವಣ್ಣನಿಗೆ ನಾಲ್ಕನೇ ಬಾರಿ ಆ್ಯಕ್ಷನ್​​ ಕಟ್ ಹೇಳಿದ್ದಾರೆ. ಇಂದು ತೆರೆ ಮೇಲೆ ಬಂದು ವೇದ ಚಿತ್ರದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ತಮಿಳುನಾಡು, ಮುಂಬೈನಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ ಇದು ನಮಗೆ ತುಂಬಾ ಖುಷಿ ತಂದು ಕೊಟ್ಟಿದೆ. ಮೊದಲ ಬಾರಿಗೆ ಗೀತಾ ಶಿವರಾಜ್​ ಕುಮಾರ್​ ನಿರ್ಮಾಪಕಿಯಾಗಿ ನಮ್ಮ ಬ್ಯಾನರ್​ನಲ್ಲಿ ಒಂದು ಒಳ್ಳೆಯ ಚಿತ್ರ ಮಾಡಿರುವುದು ಹೆಮ್ಮೆ ಎಂದು ಹೇಳಿದರು. ಇದೇ ವೇಳೆ ಚಿತ್ರ ನಿರ್ದೇಶಕ ಎ.ಹರ್ಷ ಗೆ ಮೆಚ್ಚುಗೆ ಸಲ್ಲಿಸಿದರು.

ವೇದ ಚಿತ್ರದ ಪ್ರಮೋಷನ್​ಗಾಗಿ ಚಿತ್ರ ಮಂದಿರಕ್ಕೆ ಆಗಮಿಸಿ ಚಿತ್ರ ತಂಡ ಅಭಿಮಾನಿಗಳ ಜೊತೆಗೆ ಮಾತನಾಡಿದರು. ಈ ಸಂದರ್ಭದಲ್ಲಿ ವೇದ ಚಿತ್ರ ನಿರ್ದೇಶಕ ಎ.ಹರ್ಷ, ನಾಯಕಿ ಗಾನವಿ ಲಕ್ಷ್ಮಣ್, ಶಿವಣ್ಣ ಪುತ್ರಿಯ ಪಾತ್ರದಲ್ಲಿರುವ ಅರುಣ್ ಸಾಗರ್ ಪುತ್ರಿ ಆದಿತಿ ಹಾಗೂ ಖಳ ನಾಯಕರು ಉಪಸ್ಥಿತರಿದ್ದರು.

ಇದನ್ನೂ ಓದಿ :ಪಾಂಡವಪುರದಲ್ಲಿ ವೇದ ಚಿತ್ರದ ಆಡಿಯೋ ಬಿಡುಗಡೆ: ಭರ್ಜರಿ ಸ್ಟೆಪ್ ಹಾಕಿದ ಹ್ಯಾಟ್ರಿಕ್ ಹೀರೋ

ABOUT THE AUTHOR

...view details