ಕರ್ನಾಟಕ

karnataka

ETV Bharat / state

ಬಿಜೆಪಿ ಬಾವುಟ ತೆರವುಗೊಳಿಸಲು ಮುಂದಾದ ಚುನಾವಣಾ ಅಧಿಕಾರಿಗಳು: ಮಾತಿನ ಚಕಮಕಿ

ಚುನಾವಣಾ ಅಧಿಕಾರಿಗಳು ಮನೆಗಳ ಮೇಲೆ ಇದ್ದ ಬಿಜೆಪಿ ಬಾವುಟಗಳನ್ನು ತೆರವುಗೊಳಿಸಿದ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರಿಗೆ ದೂರು ನೀಡಿದ್ದಾರೆ,

ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ಅಭಿರಾಮ್.ಜಿ ಶಂಕರ್ ಅವರನ್ನು ಭೇಟಿ ದೂರು ನೀಡಿದರು

By

Published : Mar 13, 2019, 6:21 PM IST

ಮೈಸೂರು: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮನೆಗಳ ಮೇಲೆ ಬಿಜೆಪಿ ಬಾವುಟಗಳನ್ನು ತೆರವುಗೊಳಿಸಲು ಮುಂದಾದ ಚುನಾವಣಾ ಅಧಿಕಾರಿಗಳ ವಿರುದ್ಧ ಮನೆ ಮಾಲೀಕರು ಮಾತಿನ ಚಕಮಕಿ ನಡೆಸಿದ ಘಟನೆ ನಗರದ ಅಗ್ರಹಾರದಲ್ಲಿ ನಡೆದಿದೆ.

ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ಅಭಿರಾಮ್.ಜಿ ಶಂಕರ್ ಅವರನ್ನು ಭೇಟಿ ದೂರು ನೀಡಿದರು

ಕಳೆದ ಒಂದು ತಿಂಗಳ ಹಿಂದೆ ಮೇರಾ ಪರಿವಾರ್ ಬಿಜೆಪಿ ಪರಿವಾರ್ ಆಂದೋಲನದಲ್ಲಿ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಬಾವುಟ ಹಾಕಲಾಗಿತ್ತು. ಆದರೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ಮನೆಯ ಮೇಲಿನ ಈ ಬಾವುಟವನ್ನು ತೆರವುಗೊಳಿಸಲು ಮುಂದಾದಾಗ ಮನೆ ಮಾಲೀಕರು ಹಾಗೂ ಚುನಾವಣಾ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಆ ನಂತರವು ಚುನಾವಣಾ ಅಧಿಕಾರಿಗಳು ಬಿಜೆಪಿ ಬಾವುಟವನ್ನು ಪೋಲಿಸ್ ಭದ್ರತೆಯಲ್ಲಿ ತೆರವುಗೊಳಿಸಿದರು.

ಬಿಜೆಪಿ ಬಾವುಟಗಳನ್ನು ತೆರವುಗೊಳಿಸಲು ಮುಂದಾದ ಚುನಾವಣಾ ಅಧಿಕಾರಿಗಳು

ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಪ್ರತಾಪ್ ಸಿಂಹ:

ಚುನಾವಣಾ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ಸ್ವಯಂ ಆಗಿ ಹಾಕಿಕೊಂಡಿರುವ ಬಾವುಟಗಳನ್ನು ಏಕಾಏಕಿ ತೆರವುಗೊಳಿಸುತ್ತಿದ್ದು, ಇದರಿಂದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರನ್ನು ಭೇಟಿ ಮಾಡಿ ದೂರು ನೀಡಿದರು. ಜೊತೆಗೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ABOUT THE AUTHOR

...view details