ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ರೈಲುಗಾಡಿಯ ಹೆಸರು ಬದಲಾವಣೆಯನ್ನು ರಾಜಮನೆತನದವರು ವಿರೋಧಿಸಬೇಕಿತ್ತು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿd ಅವರು, ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರ ಈ ಕ್ರಮವನ್ನು ರಾಜಮನೆತನ ವಿರೋಧಿಸಬೇಕಿತ್ತು. ಬೇಕಾದರೆ ಹೊಸದಾಗಿ 4 ರೈಲಿಗೆ ಒಡೆಯರ ಹೆಸರಿಟ್ಟಿದ್ದರೂ ಸ್ವಾಗತವಿತ್ತು. ಆದರೆ, ಟಿಪ್ಪು ಹೆಸರು ತೆಗೆದು ಮಹಾರಾಜರ ಹೆಸರು ಇಡುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಮೈಸೂರು ಮಹಾರಾಜರು ಆಕ್ಷೇಪ ವ್ಯಕ್ತಪಡಿಸಿದ್ರೆ ಅವರ ಗೌರವ ಹೆಚ್ಚಾಗುತ್ತಿತ್ತು ಎಂದರು.
ನವೆಂಬರ್ 1ರಂದು ಕರಾಳ ದಿನಾಚರಣೆ ಆಚರಿಸುವ ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು. ನವೆಂಬರ್ 1 ರಿಂದ ಹಿಂದಿ, ತಮಿಳು, ಮಲಯಾಳಂ, ಭಾಷೆಗಳ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಚಿತ್ರ ಮಂದಿರಗಳಿಗೆ ಬೆಂಕಿ ಬೀಳುತ್ತೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ರವಾನಿಸಿದರು.