ಮೈಸೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಚಿವ ವಿ. ಸೋಮಣ್ಣ ಪತ್ರಿಕಾಗೋಷ್ಠಿ ಸಂದರ್ಭ ಒಂದು ನಿಮಿಷ ಮೌನಚಾರಣೆ ಮಾಡಿ ಸಂತಾಪ ಸೂಚಿಸಿದರು.
ರವಿ ಬೆಳಗೆರೆ ನಿಧನ: ಮೌನಚಾರಣೆ ಮಾಡಿದ ಸಚಿವ ವಿ. ಸೋಮಣ್ಣ - ಮೈಸೂರು ಲೇಟೆಸ್ಟ್ ನ್ಯೂಸ್
ವಸತಿ ಸಚಿವ ವಿ. ಸೋಮಣ್ಣ ತಮ್ಮ ಇಲಾಖೆಯ ಪ್ರಗತಿ ಬಗ್ಗೆ ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿ ಬಳಿಕ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ನಡೆಸಿದರು.
ವಸತಿ ಸಚಿವ ವಿ. ಸೋಮಣ್ಣ ತಮ್ಮ ಇಲಾಖೆಯ ಪ್ರಗತಿ ಬಗ್ಗೆ ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿ ಬಳಿಕ ಒಂದು ನಿಮಿಷ ಮೌನಾಚರಣೆ ನಡೆಸಿದರು. ಬಳಿಕ ಮಾತನಾಡಿದ ಅವರು, ಪತ್ರಿಕಾ ಮಾಧ್ಯಮದಲ್ಲಿ ಬಹಳ ಹೆಸರನ್ನು ಗಳಿಸಿದ್ದ ರವಿ ಬೆಳಗೆರೆ ವಿಧಿವಶರಾಗಿರುವುದು ನೋವಿನ ಸಂಗತಿ. ಹಿರಿಯ ಪತ್ರಕರ್ತರಾಗಿ ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಅವರ ಪೇಪರ್ ಮತ್ತು ಪೆನ್, ಆ ಇಂಕ್ ಎಷ್ಟು ಶಾರ್ಪ್ ಇತ್ತೆಂದರು. ಹಾಯ್ ಬೆಂಗಳೂರು ಪೇಪರ್ ಅನ್ನು ಓದುವುದಕ್ಕೆ ಜನ ಕಾಯುತ್ತಿದ್ದರು. ಸದ್ಯ ನಮ್ಮನ್ನೆಲ್ಲ ಅಗಲಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.