ಕರ್ನಾಟಕ

karnataka

ETV Bharat / state

ಮೈಸೂರು: ಸೋಲಾರ್ ಪ್ಲಾಂಟ್​ನೊಳಗೆ ನುಗ್ಗಿದ್ದ ಎರಡು ಚಿರತೆ ಮರಿಗಳ ರಕ್ಷಣೆ

ಸೋಲಾರ್ ಪ್ಲಾಂಟ್​ ಆವರಣದೊಳಗೆ ನುಗ್ಗಿದ ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.

two-leopard-cubs-rescued-from-piriyapattana-solar-plant
ಸೋಲಾರ್ ಪ್ಲಾಂಟ್​ನೊಳಗೆ ಸಿಲುಕಿದ್ದ ಎರಡು ಚಿರತೆ ಮರಿಗಳ ರಕ್ಷಣೆ

By

Published : Apr 3, 2022, 8:06 PM IST

ಮೈಸೂರು:ಸೋಲಾರ್ ಪ್ಲಾಂಟ್​ ಆವರಣದೊಳಗೆ ನುಗ್ಗಿದ್ದ ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೋಪಾನವಾಗಿ ಸೆರೆಹಿಡಿದಿರುವ ಘಟನೆ ಪಿರಿಯಾಪಟ್ಟಣದಲ್ಲಿ ಭಾನುವಾರ ನಡೆದಿದೆ. ತಾಲೂಕಿನ ಬೇಳಾಲು ಗ್ರಾಮದ ಸಮೀಪವಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್​​ ಆವರಣದಲ್ಲಿ ಎರಡು ವರ್ಷ ಪ್ರಾಯದ ಎರಡು ಚಿರತೆ ಮರಿಗಳು ಸಿಲುಕಿದ್ದವು.

ಶನಿವಾರ ರಾತ್ರಿ ಪ್ಲಾಂಟ್​​ ಬಳಿ ಚಿರತೆ ಮರಿಗಳು ಕೂಗಾಡುತ್ತಿರುವುದನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಚಿರತೆ ಮರಿ

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ಮರಿಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಣೆ ಮಾಡಿದ್ದಾರೆ. ಬಳಿಕ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಭಾನುವಾರ ಸೋಲಾರ್ ಪ್ಲಾಂಟ್​​ ನೌಕರರಿಗೆ ರಜೆ ಇದ್ದಿದ್ದರಿಂದ ಚಿರತೆ ಮರಿಗಳಿಂದ ಯಾವುದೇ ತೊಂದರೆ ಆಗಿಲ್ಲ.

ಇದನ್ನೂ ಓದಿ:ಅಪಘಾತದಲ್ಲಿ ನಿವೃತ್ತ ಎಎಸ್​ಐ ಸಾವು.. ಕಡಬದಲ್ಲಿ ನೀರುಪಾಲಾದ ಐಟಿಐ ವಿದ್ಯಾರ್ಥಿ

ABOUT THE AUTHOR

...view details