ಕರ್ನಾಟಕ

karnataka

ಕೋವಿಡ್ ಚಿಕಿತ್ಸೆಗೆ ಹೋದ ಮಹಿಳೆ ಅನಾಥ ಶವ.. ಕಾರಣ ನಿಗೂಢ..!

By

Published : Dec 1, 2020, 6:45 PM IST

ಕೋವಿಡ್ ಚಿಕಿತ್ಸೆಗೆಂದು ಕರೆದುಕೊಂಡ ಮಹಿಳೆ ಅನಾಥಶವವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಅದು ಆ್ಯಂಬುಲೆನ್ಸ್ ಚಾಲಕನ ನಿರ್ಲಕ್ಷ್ಯವೋ, ವೈದ್ಯರ ಬೇಜವಾಬ್ದಾರಿಯೋ ಅನ್ನೋದು ಮಾತ್ರ ನಿಗೂಢವಾಗಿದೆ.

reason suspence
ಕಾರಣ ನಿಗೂಢ..!

ಮೈಸೂರು:ಆಂಬುಲೆನ್ಸ್​ ಚಾಲಕನ ಯಡವಟ್ಟಿನಿಂದ ಕೋವಿಡ್​ ಚಿಕಿತ್ಸೆಗೆ ಹೋದ ಮಹಿಳೆ ಅನಾಥವಶವಾಗಿದ್ದು, ಕುಟುಂಬಸ್ಥರಿದ್ದರೂ, ಪೊಲೀಸರೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಕೋವಿಡ್ ಚಿಕಿತ್ಸೆಗೆ ಹೋದ ಮಹಿಳೆ ಅನಾಥ ಶವ.. ಸಂಬಂಧಿಕರಿಗೆ ಆಘಾತ
ತಿಂಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಪಿರಿಯಾಪಟ್ಟಣ ತಾಲೂಕಿನ ನಂದೀಪುರ ಗ್ರಾಮದ ನಿವಾಸಿ ಪದ್ಮಮ್ಮ ಅವರಿಗೆ ಸೆಪ್ಟೆಂಬರ್ 8 ರಂದು ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆ ವೈದ್ಯರು, ಆ್ಯಂಬುಲೆನ್ಸ್ ಚಾಲಕನಿಗೆ ಸೋಂಕಿತ ಮಹಿಳೆಯನ್ನು ಮೇಟಗಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್​​ಗೆ ಸಾಗಿಸುವಂತೆ ಸೂಚಿಸಿದ್ದಾರೆ. ಆ್ಯಂಬುಲೆನ್ಸ್ ಚಾಲಕ, ಪದ್ಮಮ್ಮರನ್ನು ಕೋವಿಡ್​ ಸೆಂಟರ್​ಗೆ ಸೇರಿಸಿದ್ದಾನೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ ಅಲ್ಲಿ ನಡೆದಿದ್ದೇ ಬೇರೆಯಾಗಿತ್ತು. 15 ದಿನಗಳ ಬಳಿಕ ಪದ್ಮಮ್ಮ ಸಹೋದರ ಭಾಸ್ಕರಾಚಾರ್, ಕೋವಿಡ್ ಸೆಂಟರ್​ಗೆ ಬಂದು ಅಕ್ಕನ ಬಗ್ಗೆ ವಿಚಾರಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಪದ್ಮಮ್ಮ ಎಂಬ ಹೆಸರಿನ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ.

ಇದರಿಂದ ಕಂಗಾಲಾದ ಭಾಸ್ಕರಾಚಾರ್, ಮೈಸೂರಿನ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿ, ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲು ಹೋಗಿದ್ದಾರೆ. ಆ ವೇಳೆ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಮೇಟಗಳ್ಳಿ ಪೊಲೀಸರು ಪದ್ಮಮ್ಮ ಫೋಟೋ ನೋಡುತ್ತಿದ್ದಂತೆ, ಇವರು ಸತ್ತು ಹೋಗಿದ್ದಾರೆ. ಅನಾಥ ಶವ ಅಂತಾ ಅಕ್ಟೋಬರ್ 31 ರಂದು ಅಂತ್ಯ ಸಂಸ್ಕಾರ ಮಾಡಿದ್ದೀವಿ ಎಂದಿದ್ದಾರೆ. ಅಕ್ಕನ ಬರುವಿಕೆಗೆ ಕಾಯುತ್ತಿದ್ದ ಭಾಸ್ಕರಾಚಾರ್ ಹಾಗೂ ಕುಟುಂಬಸ್ಥರಿಗೆ ಈ ಸುದ್ದಿ ಆಘಾತ ತಂದಿದೆ.

ಅಂದ ಹಾಗೆ ಪದ್ಮಮ್ಮ ಸಾವು ಹೇಗೆ ಸಂಭವಿಸಿದೆ ಅನ್ನೋದು ಮಾತ್ರ ಇನ್ನೂ ನಿಗೂಢ.

ABOUT THE AUTHOR

...view details