ಮೈಸೂರು: ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋದ ವಿದ್ಯಾರ್ಥಿ ನೀರುಪಾಲಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ವೇಣುಗೋಪಾಲ್ (19) ಎಂಬಾತ ನೀರಲ್ಲಿ ಮುಳುಗಿ ಮೃತ ಪಟ್ಟ ವಿದ್ಯಾರ್ಥಿ.
ಈತ ಹುಲ್ಲಹಳ್ಳಿ ಬಳಿ ಇರುವ ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಜಾರಿ ಕಾಲುವೆಗೆ ಬಿದ್ದಿದ್ದಾನೆ. ಈ ವೇಳೆ ಅಲ್ಲೇ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಜೋರಾಗಿ ಕೂಗಿದ್ದಾರೆ.