ಕರ್ನಾಟಕ

karnataka

ETV Bharat / state

ಈ ಬಾರಿಯ ಮಹಿಳಾ ಮತ್ತು ಮಕ್ಕಳ ದಸರಾದಲ್ಲಿದೆ ಹಲವು ವಿಶೇಷತೆ!

ಅವಿಭಕ್ತ ಕುಟುಂಬ ವ್ಯವಸ್ಥೆಯು ಪ್ರಸ್ತುತ ದಿನಗಳಲ್ಲಿ ಕ್ಷೀಣಿಸುತ್ತಿರುವ ಹಿನ್ನೆಲೆ ಅದರ ಕುರಿತು ಅರಿವು ಮೂಡಿಸುವ ಸಲುವಾಗಿ ಕುಟುಂಬಸ್ಥರಿಂದ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ವಿದ್ಯಾ ಅರಸ್ ತಿಳಿಸಿದರು.

ಈ ಬಾರಿಯ ಮಹಿಳಾ ಮತ್ತು ಮಕ್ಕಳ ದಸರಾದಲ್ಲಿದೆ ಹಲವು ವಿಶೇಷತೆ..!

By

Published : Sep 24, 2019, 2:53 AM IST

ಮೈಸೂರು: ಅವಿಭಕ್ತ ಕುಟುಂಬದ ಬಗ್ಗೆ ಮಹತ್ವವನ್ನು ಸಾರುವ ದೃಷ್ಟಿಯಿಂದ ಈ ಬಾರಿಯ ದಸರಾದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಆಯೋಜಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ವಿದ್ಯಾ ಅರಸ್ ತಿಳಿಸಿದರು.

ಈ ಬಾರಿಯ ಮಹಿಳಾ ಮತ್ತು ಮಕ್ಕಳ ದಸರಾದಲ್ಲಿದೆ ಹಲವು ವಿಶೇಷತೆ!

ವಾರ್ತಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಕ್ತ ಕುಟುಂಬ ವ್ಯವಸ್ಥೆಯು ಪ್ರಸ್ತುತ ದಿನಗಳಲ್ಲಿ ಕ್ಷೀಣಿಸುತ್ತಿರುವ ಹಿನ್ನೆಲೆ ಕುಟುಂಬಸ್ಥರಿಂದ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ. ಇದರಿಂದ ಅವಿಭಕ್ತ ಕುಟುಂಬದ ಬಗ್ಗೆ ಜಾಗೃತಿ ಮೂಡಿಸುವ ಆಲೋಚನೆಯನ್ನು ಹೊಂದಿದ್ದೇವೆ. ಮಕ್ಕಳ ದಸರಾ ಅಂಗವಾಗಿ ಗ್ರಾಮಾಂತರ ಭಾಗದ ಮಕ್ಕಳನ್ನು ಮೈಸೂರಿಗೆ ಕರೆ ತಂದು ದಸರಾ ಪ್ರದರ್ಶನ ನಡೆಸಲಾಗುತ್ತದೆ. ಮಹಿಳಾ ದಸರಾ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 4ರವರೆಗೆ ಅಂಬಾವಿಲಾಸ ಅರಮನೆಯ ಮೈದಾನದಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಜೆ.ಕೆ. ಮೈದಾನದಲ್ಲಿ ಮಹಿಳಾ ವಸ್ತು ಪ್ರದರ್ಶನ, ಬಾಲಕಿಯರ ಬಾಲ‌ ಮಂಡಳಿ ವತಿಯಿಂದ ಡೊಳ್ಳು ಕುಣಿತ, ಕಂಸಾಳೆ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅ. 1ರಂದು ಮಹಿಳೆಯರಿಂದ ಜಾನಪದ ಸಿರಿ, ನಗೆ ಹೊನಲು-ಹಾಸ್ಯ ಕಾರ್ಯಕ್ರಮ, ಚಲನಚಿತ್ರ ಸಮೂಹ ನೃತ್ಯ, ಫ್ಯಾಷನ್ ಶೋ, ದೇಸೀ ಗರ್ಲ್ ಫ್ಯಾಷನ್ ಶೋ, ಪೌರಾಣಿಕ ನಾಟಕ ಮತ್ತು ನೃತ್ಯ ರೂಪಕ ಸ್ಪರ್ಧೆಗಳು ನಡೆಯಲಿವೆ. ಇನ್ನು ಅ. 3ರಂದು ವಿಶೇಷಚೇತನ ಮಕ್ಕಳಿಂದ ಪ್ರತಿಭಾ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಹಾಗೂ ಹಿರಿಯ ನಾಗರಿಕರಿಗೂ ಈ ಬಾರಿ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಅ. 4ರಂದು ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ನೇತೃತ್ವದಲ್ಲಿ ಒಲೆ ರಹಿತ ಸವಿ ರುಚಿ, ಚುಟುಕು ಹಾಸ್ಯ ಸ್ಪರ್ಧೆ, ದಂಪತಿಗಳ ಸ್ಪರ್ಧೆ, ಗೋಪಿಯವರಿಂದ ಮಿಮಿಕ್ರಿ ಇನ್ನೂ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ABOUT THE AUTHOR

...view details