ಕರ್ನಾಟಕ

karnataka

ETV Bharat / state

ಶಾಮನೂರು ಶಿವಶಂಕರಪ್ಪಗೆ ಯಾರೋ ಮಿಸ್ ಲೀಡ್ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ - ​ ETV Bharat Karnataka

ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗೋಷ್ಟಿ ನಡೆಸಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಯಾರೋ ಮಿಸ್ ಲೀಡ್ ಮಾಡಿದ್ದಾರೆ ಎಂದಿದ್ದಾರೆ.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

By ETV Bharat Karnataka Team

Published : Oct 2, 2023, 3:57 PM IST

Updated : Oct 2, 2023, 4:28 PM IST

ಶಾಮನೂರು ಶಿವಶಂಕರಪ್ಪಗೆ ಯಾರೋ ಮಿಸ್ ಲೀಡ್ ಮಾಡಿದ್ದಾರೆ

ಮೈಸೂರು :ಶಾಸಕಶಾಮನೂರು ಶಿವಶಂಕರಪ್ಪ ಹಿರಿಯ ರಾಜಕಾರಣಿ, ಅದರ ಬಗ್ಗೆ ಅನುಮಾನವಿಲ್ಲ. ಆದರೇ, ಅವರಿಗೆ ಯಾರೋ ಮಿಸ್ ಲೀಡ್ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಹೇಳಿದರು.

ಈ ಕುರಿತು ಸೋಮವಾರ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಲಿಂಗಾಯತ ಅಧಿಕಾರಿಗಳ ಅಂಕಿ ಅಂಶಗಳನ್ನು ವಿವರಿಸಿದರು. ನಮ್ಮ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಹಳ ಸದ್ದು ಮಾಡುತ್ತಿದೆ ಹಾಗೂ ಮಾಧ್ಯಮಗಳಿಗೆ ಆಹಾರವಾಗಿದೆ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ರಾಜಕಾರಣಿ, ಅನುಭವಿಗಳು. ಅದರಲ್ಲಿ ನೋ ಡೌಟ್. ಅವರ ಬಗ್ಗೆ ಅಪಾರ ಗೌರವವಿದೆ, ಮುಂದೆಯೂ ಇರುತ್ತದೆ. ಅವರಿಗೆ ಯಾರೋ ಮಿಸ್ ಲೀಡ್ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಲಕ್ಷಾಂತರ ಜನ ಕಾರ್ಯಕರ್ತರ ಬೆವರಿನ ಶ್ರಮ ಇದೆ. ಎಷ್ಟೋ ಜನ ಕಾರ್ಯಕರ್ತರು ಪಕ್ಷಕ್ಕೋಸ್ಕರ ಕೇಸ್ ಹಾಕಿಸಿಕೊಂಡು ಬಿಜೆಪಿ ಪಕ್ಷವನ್ನು ಕಿತ್ತು ನಮ್ಮ ಸರ್ಕಾರ ಬರಲು ಶ್ರಮಿಸಿದ್ದಾರೆ. ಆದರೂ ಆ ಕಾರ್ಯಕರ್ತರಿಗೆ ಯಾರಿಗೂ ಅಧಿಕಾರ ಸಿಕ್ಕಿಲ್ಲ. ಅಧಿಕಾರ ಸಿಕ್ಕವರು ಸ್ವಲ್ಪ ತಾಳ್ಮೆಯಿಂದ ಸಮಾಧಾನದಿಂದ ಇರಬೇಕು. ಏನಾದರೂ ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಬೇಕು. ಇಲ್ಲ ಹೈಕಮಾಂಡ್​ ಇದೆ, ಅಲ್ಲಿ ತಮ್ಮ ಬೇಸರಗಳಿದ್ದರೆ ತಿಳಿಸಬೇಕು. ಮಾಧ್ಯಮಗಳ ಮುಂದೆ ಹೇಳಿಕೆ ಕೊಡಬಾರದು ಎಂದು ಕಾಂಗ್ರೆಸ್​ ಶಾಸಕರು ಹಾಗು ಸಚಿವರಿಗೆ ಮನವಿ ಮಾಡಿದರು.

ಲಿಂಗಾಯತ ಅಧಿಕಾರಿಗಳ ಅಂಕಿ ಅಂಶ : ಕರ್ನಾಟಕ ಸರ್ಕಾರದಲ್ಲಿ ಸದ್ಯ ವಿವಿಧ ಇಲಾಖೆಗಳಲ್ಲಿ ಮುಖ್ಯ ಇಂಜಿನಿಯರ್ 40 ಜನ ಇದ್ದಾರೆ. ಅದರಲ್ಲಿ 10 ಜನ ಲಿಂಗಾಯತ, 9 ಜನ ಒಕ್ಕಲಿಗ, 4 ಜನ ಕುರುಬ, ಇತರೆ ಮಿಕ್ಕವರು ಇದ್ದಾರೆ. ಬರಿ ಕುರುಬರು ಮಾತ್ರ ಹಾಯಕಟ್ಟಿನ ಸ್ಥಳದಲ್ಲಿದ್ದಾರೆ ಎನ್ನುವುದು ಸುಳ್ಳು. ಒಟ್ಟು 41 ವಿಶ್ವವಿದ್ಯಾಲಯಗಳಿವೆ. ಅದರಲ್ಲಿ 14 ವಿಶ್ವವಿದ್ಯಾಲಯಗಳಿಗೆ ಲಿಂಗಾಯತರು ವಿಸಿ ಆಗಿದ್ದಾರೆ. 8 ಜನ ಬ್ರಾಹ್ಮಣರು ವಿಸಿ ಇದ್ದಾರೆ. ಜೊತೆಗೆ ರಾಜ್ಯದಲ್ಲಿ ಒಟ್ಟು 272 ಜನ ಐಎಎಸ್ ಇದ್ದಾರೆ. ಅದರಲ್ಲಿ ಬೇರೆ ರಾಜ್ಯದವರನ್ನು ಬಿಟ್ಟು ನಮ್ಮ ರಾಜ್ಯದವರು 87 ಜನ ಇದ್ದಾರೆ. ಆ 87 ಜನರಲ್ಲಿ 22 ಜನ ಲಿಂಗಾಯಿತರು. ಎಲ್ಲರೂ ಆಯಕಟ್ಟಿನ ಜಾಗದಲ್ಲಿ ಇದ್ದಾರೆ. ಸಿಇಒ 10 ಜನ ಲಿಂಗಾಯತರು. ಇದಲ್ಲದೆ ಕೆಎಎಸ್ ಎ ಸಿ ಹುದ್ದೆಯ 439 ಜನರಲ್ಲಿ 102 ಜನ ಲಿಂಗಾಯತರಿದ್ದು, ಹೌಸಿಂಗ್ ಬೋರ್ಡ್ ಕಮಿಷನರ್, ರೇಷ್ಮೆ ಕಮಿಷನರ್, ಅಗ್ರಿಕಲ್ಚರ್ ಕಮಿಷನರ್, ಕ್ರೆಡಲ್ ಎಂ ಡಿ, ಚೆಸ್ಕಾಂ ಎಂ ಡಿ, ಜೆಸ್ಕಾಂ ಎಂ ಡಿ, ಕರ್ನಾಟಕ ನೀರಾವರಿ ನಿಗಮ ಎಂಡಿ, ಎಲ್ಲರೂ ಲಿಂಗಾಯತರೇ ಎಂದು ಲಕ್ಷ್ಮಣ್ ವಿವರಣೆ ನೀಡಿದರು.

ಜೆಡಿಎಸ್​ ಸಭೆ ಮೇಲೆ ಸಭೆ :ಮಾಜಿ ಪ್ರಧಾನಿಹೆಚ್ .ಡಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಸಭೆ ಮೇಲೆ ಸಭೆ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ರಾಜ್ಯದ ಉಳಿವಿಗಾಗಿ ಮೈತ್ರಿಯಂತೆ. ರಾಜ್ಯದಲ್ಲಿ ಯಾವುದಾದರೂ ಜ್ವಲಂತ ಸಮಸ್ಯೆ ಇದೆಯಾ ಹೇಳಲಿ ನೋಡೋಣ. ದೇವೇಗೌಡರು ಮೋದಿ ಜೊತೆ ಫೋನ್​ನಲ್ಲಿ ಮಾತನಾಡಿ ಕಾವೇರಿ ಕುರಿತು ವಸ್ತುಸ್ಥಿತಿ ಅರಿಯಲು ಒಂದು ಟೀಮ್ ಕಳಿಸಿ ಅಂತ ಅನ್ನಲಿ ನೋಡೋಣ. ಮಾನಿಟರಿ ಅಥಾರಿಟಿ ಮತ್ತು ಕೇಂದ್ರ ಜಲಶಕ್ತಿ ಇಲಾಖೆಯಡಿ ಬರುತ್ತದೆ ಅಲ್ಲವೇ? ಮೋದಿ ಅವರಿಂದ ಡೈರೆಕ್ಷನ್ ಕೊಡಿಸಲಿ ಎಂದು ಲಕ್ಷ್ಮಣ ಒತ್ತಾಯಿಸಿದರು.

ಎಂಪಿ ತೇಜಸ್ವಿ ಸೂರ್ಯ ಬೆಂಗಳೂರಲ್ಲಿ ಕುಳಿತು ಪ್ರೆಸ್ ಮೀಟ್ ಮಾಡಿ ಮಾತನಾಡುತ್ತಾರೆ. ಬಿಜೆಪಿಯವರೇ ನಿಮ್ಮ ಯೋಗ್ಯತೆಗೆ 25 ಜನ ಎಂಪಿ ಇದ್ದೀರಿ. ಮೋದಿಯವರ ಹತ್ತಿರ ಒಂದು ಅಪಾಯಿಂಟ್ಮೆಂಟ್ ತೆಗೆದುಕೊಳ್ಳಿ ಸಾಕು. ಇಲ್ಲವಾದರೆ ಮೋದಿ ಜೊತೆ ಒಂದು ಫೋಟೋನಾದರೂ ಕ್ಲಿಕ್ಕಿಸಿಕೊಂಡು ಕಾವೇರಿ ಸಲುವಾಗಿ ಬಂದಿದ್ದೀವಿ ಅಂತಾ ಹಾಕಿ ಎಂದು ಲಕ್ಷ್ಮಣ್​ ವ್ಯಂಗ್ಯವಾಡಿದರು.

ಇದನ್ನೂ ಓದಿ :ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Last Updated : Oct 2, 2023, 4:28 PM IST

ABOUT THE AUTHOR

...view details