ಮೈಸೂರು: ಲಾಕ್ಡೌನ್ ಸಮಯದಲ್ಲಿ ಸುಮಾರು 2 ತಿಂಗಳ ಕಾಲ ಬಂದ್ ಆಗಿದ್ದ ಮೈಸೂರು ನಿಲ್ದಾಣ ಮತ್ತೆ ಕಾರ್ಯಾರಂಭ ಮಾಡಿತ್ತು. ಸಾಂಸ್ಕತಿಕ ನಗರಿ ಮೈಸೂರು ಪ್ರವಾಸೋದ್ಯಮ ನಗರವಾಗಿರುವುದರಿಂದ ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ಗೋವಾ, ಬೆಂಗಳೂರು, ಬೆಳಗಾವಿ, ಹೈದರಾಬಾದ್, ಕೊಚ್ಚಿ ನಗರಗಳಿಗೆ ವಿಮಾನಯಾನವನ್ನು ಹೆಚ್ಚಿಸಲಾಗಿದೆ.
ಮೈಸೂರು ವಿಮಾನಯಾನಕ್ಕೆ ಹೆಚ್ಚಿದ ಬೇಡಿಕೆ..ಏರ್ಪೋರ್ಟ್ನಲ್ಲಿ ಸುರಕ್ಷತಾ ಕ್ರಮ - Flights started in Mysore Airport
ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ವಿಮಾನಯಾನಕ್ಕೆ ಹೆಚ್ಚಿನ ಬೇಡಿಕೆ ಇದ್ದು ಇದೀಗ ಬೆಂಗಳೂರು, ಹೈದರಾಬಾದ್, ಗೋವಾ, ಬೆಳಗಾವಿ, ಕೊಚ್ಚಿ ನಗರಗಳಿಗೆ ವಿಮಾನಯಾನ ಆರಂಭಿಸಲಾಗಿದೆ. ಈ ಸಂಬಂಧ ವಿಮಾನನಿಲ್ದಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ವಿಮಾನಯಾನಕ್ಕೆ ಎಲ್ಲಾ ಸಿದ್ಧತೆ ನಡೆದಿದ್ದು ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ, ವಿಮಾನ ನಿಲ್ದಾಣದಿಂದ ಬೇರೆ ಕಡೆ ಹೋಗುವ ಪ್ರತಿಯೊಬ್ಬ ಪ್ರಯಾಣಿಕರನ್ನು ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಎಲ್ಲಾ ಪರೀಕ್ಷೆಗೆ ಒಳಪಡಿಸಲಾಗುವುದು. ಮೈಸೂರು ವಿಮಾನ ನಿಲ್ದಾಣಕ್ಕೆ ಬೇರೆ ಕಡೆಯಿಂದ ಬಂದ ವಿಮಾನಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ ನಂತರವೇ ಪ್ರಯಾಣಿಕರನ್ನು ವಿಮಾನದೊಳಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಕೊರೊನಾ ಪರಿಸ್ಥಿತಿಯಲ್ಲಿ ಇತರ ಸಾರಿಗೆಗಿಂತ ವಿಮಾನ ಸಾರಿಗೆ ಹೆಚ್ಚು ಸುರಕ್ಷಿತವಾಗಿರುವುದರಿಂದ ಪ್ರತಿನಿತ್ಯ ಬೇರೆ ನಗರಗಳಿಂದ ಮೈಸೂರಿಗೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೊಚ್ಚಿ , ಹೈದರಾಬಾದ್, ಗೋವಾ, ಬೆಳಗಾವಿ ನಗರಗಳಿಂದ ಹೆಚ್ಚಿನ ಪ್ರಯಾಣಿಕರು ವಿಮಾನದ ಮೂಲಕವೇ ಆಗಮಿಸುತ್ತಿದ್ದು ಬಹುತೇಕ ಭರ್ತಿಯಾಗಿರುತ್ತದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.