ಕರ್ನಾಟಕ

karnataka

ETV Bharat / state

ಲಾರಿ-ಕಾರು ಮುಖಾಮುಖಿ ಡಿಕ್ಕಿ... ಆರ್​ಟಿಒ ಇನ್​ಸ್ಪೆಕ್ಟರ್  ಸ್ಥಳದಲ್ಲೇ ಸಾವು - ಅರ್.ಟಿ.ಓ.ಇನ್ಸ್ ಪೆಕ್ಟರ್ ಅಬ್ದುಲ್ ನಸೀಮ್

ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಚಾಮರಾಜನಗರ ಆರ್​ಟಿ ಇನ್ಸ್ಪೆ​ಕ್ಟರ್ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಆರ್ ಟಿಒ ಇನ್ ಸ್ಪೆಕ್ಟರ್ ಸಾವು

By

Published : Sep 13, 2019, 5:30 AM IST

Updated : Sep 13, 2019, 6:00 AM IST

ಮೈಸೂರು: ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಚಾಮರಾಜನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್​ಟಿಒ ಇನ್ ಸ್ಪೆಕ್ಟರ್ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಾ.ನಗರ ಅರ್.ಟಿ.ಓ.ಇನ್ಸ್ ಪೆಕ್ಟರ್ ಅಬ್ದುಲ್ ನಸೀಮ್ ರವರು ರಸ್ತೆ ಅಪಘಾತದಲ್ಲಿ ಮೃತಪಟ್ಟವರು. ಮಂಡ್ಯ ನ್ಯಾಯಾಲಯದಲ್ಲಿ ಪ್ರಕರಣವೊಂದರ ಮಾಹಿತಿ ನೀಡಲು ಹೋಗಿ ವಾಪಸ್ ಹೋಗುವಾಗ ಮೈಸೂರಿನ ತಿ.ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಬಳಿ ಇವರ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಇನ್​ಸ್ಪೆಕ್ಟರ್ ಅಬ್ದುಲ್ ನಸೀಮ್ ಅವರು ಸ್ಥಳದಲ್ಲಿಯೇ ಮೃತಪಟ್ಟರೆ, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಆರ್ ಟಿಒ ಇನ್ ಸ್ಪೆಕ್ಟರ್ ಸಾವು

ಇದಾದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 13, 2019, 6:00 AM IST

ABOUT THE AUTHOR

...view details