ಕರ್ನಾಟಕ

karnataka

ETV Bharat / state

ಎನ್​ಇಪಿ ದೇಶದ ಶೈಕ್ಷಣಿಕ ಕ್ಷೇತ್ರದ ದಿಕ್ಸೂಚಿಯಾಗಲಿ: ಮೈಸೂರು ವಿವಿ ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿ ಆಶಯ - Prime Minister Narendra Modi's speech

ಮೈಸೂರು ವಿವಿಯಲ್ಲಿ ಸಾಹಿತಿಗಳಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕುವೆಂಪು ಅವರ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದರು. ನಂತರ ಭಾಷಣ ಮುಂದುವರಿಸಿ, ಶೈಕ್ಷಣಿಕ ಪ್ರಗತಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮೈಸೂರು ವಿವಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಿದ್ದು, ದೇಶದ ಎಲ್ಲಾ ವಿವಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

Prime minister Narendra Modi  Speech Mysuru VV
: ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿ ಆಶಯ

By

Published : Oct 19, 2020, 3:22 PM IST

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ಕ್ಷೇತ್ರದ ದಿಕ್ಸೂಚಿಯಾಗಲಿ, ಶೈಕ್ಷಣಿಕ ಪ್ರಗತಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೈಸೂರು ವಿವಿಯ 100ನೇ ಘಟಿಕೋತ್ಸವ ಭಾಷಣದಲ್ಲಿ ಆಶಯ ವ್ಯಕ್ತಪಡಿಸಿದರು.

ಇಂದು ಮೈಸೂರು ವಿವಿಯ ಕ್ರಾಫರ್ಡ್ ಹಾಲ್​​ನಲ್ಲಿ ನಡೆದ 100ನೇ ಘಟಿಕೋತ್ಸವದ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಆರಂಭಿಸಿದರು. ಪದವಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿ, ಈ ವಿವಿಯನ್ನು ಪ್ರಾರಂಭ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ನಮಗೆಲ್ಲ ಮಾದರಿ ಎಂದರು.

ಮೈಸೂರು ವಿವಿಯಲ್ಲಿ ಸಾಹಿತಿಗಳಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕುವೆಂಪು ಅವರ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ನಂತರ ಭಾಷಣ ಮುಂದುವರಿಸಿ, ಶೈಕ್ಷಣಿಕ ಪ್ರಗತಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮೈಸೂರು ವಿವಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಿದ್ದು, ದೇಶದ ಎಲ್ಲಾ ವಿವಿಗಳು ಇದಕ್ಕೆ ಸಹಕಾರ ನೀಡಬೇಕು ಎಂದರು.

ಉನ್ನತ ಶಿಕ್ಷಣ ಪಡೆಯುತ್ತಿರುವವರಲ್ಲಿ ವಿದ್ಯಾರ್ಥಿನಿಯರಿಗಿಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿವಿಗಳು ಮಹತ್ವದ ಪಾತ್ರ ವಹಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಇಂದು ನಡೆದ ಘಟಿಕೋತ್ಸವದಲ್ಲಿ ಕೋವಿಡ್ ಕಾರಣದಿಂದಾಗಿ ಕೇವಲ 100 ಜನ ಆಹ್ವಾನಿತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅತೀ ಹೆಚ್ಚು ಚಿನ್ನದ ಪದಕ ಪಡೆದ 30 ಜನರಿಗೆ ಮಾತ್ರ ಪದಕ ಪ್ರದಾನ ಮಾಡಲಾಯಿತು. ಇಂದು 29,018 ವಿದ್ಯಾರ್ಥಿಗಳು ವರ್ಚುವಲ್​ ಮೂಲಕ ಪದವಿ ಪಡೆದರು. 654 ಮಂದಿಗೆ ಪಿಎಚ್​​ಡಿ ಹಾಗೂ 7,974 ಮಂದಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ಮೈಸೂರು ವಿವಿ ಶೀಘ್ರದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುವ ವಿಶ್ವಾಸವಿದೆ: ಪ್ರಧಾನಿ ಮೋದಿ

ಒಟ್ಟು 392 ಪದಕಗಳು 198 ಬಹುಮಾನಗಳನ್ನು 230 ಮಂದಿ ಪಡೆದಿದ್ದು, ಅದರಲ್ಲಿ ಇಂದು ಸಾಂಕೇತಿಕವಾಗಿ ಅತಿ ಹೆಚ್ಚು ಪದಕ ಪಡೆದ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ.ಹೇಮಂತ್ ಕುಮಾರ್, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್​​ ನಾರಾಯಣ ಭಾಗವಹಿಸಿದ್ದರು.

ABOUT THE AUTHOR

...view details