ಕರ್ನಾಟಕ

karnataka

ETV Bharat / state

ವಿಶ್ವ ಯೋಗ ದಿನಕ್ಕೆ ಸಾಂಸ್ಕೃತಿಕ ನಗರಿಗೆ ಬರ್ತಾರಾ ಮೋದಿ? - ನರೇಂದ್ರ ಮೋದಿ

2022ರ ಹೊರಗೆ ನರೇಂದ್ರ ಮೋದಿಯವರ ಕನಸಿನ‌ ಕೂಸಾದ ಆಶ್ರಯ ಯೋಜನೆಯಡಿ ಸ್ವಂತ ಸೂರನ್ನು ಪ್ರತಿಯೊಬ್ಬರಿಗು ಕಲ್ಪಿಸುವ ಉದ್ದೇಶವಿದೆ. ಈ‌ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯೊನ್ಮುಖರಾಗಬೇಕು ಎಂದರು.

ಶಾಸಕ‌ ರಾಮದಾಸ್

By

Published : May 25, 2019, 6:42 PM IST

ಮೈಸೂರು:ಈ ಬಾರಿ ವಿಶ್ವ ಯೋಗ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಶಾಸಕ‌ ರಾಮದಾಸ್ ತಿಳಿಸಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಕೆ.ಆರ್.‌ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್, ಈ ಬಾರಿ ಜೂನ್ 21 ರಂದು ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಕ್ಕೆ ಪ್ರಧಾನಿ‌ ನರೇಂದ್ರ ಮೋದಿಯವರನ್ನು ಆಹ್ವಾನಿಸಲು ನಿರ್ಧರಿಸಿದ್ದೇವೆ. ಸಮಯ ಕಡಿಮೆ ಇರುವ ಕಾರಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.

ಶಾಸಕ‌ ರಾಮದಾಸ್

ಹಳೆಯ ಮೈಸೂರು ಭಾಗದಲ್ಲಿ ಈ ಬಾರಿ ಬಿಜೆಪಿಯಿಂದ ಇಬ್ಬರು ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಇವರಲ್ಲಿ ಕಿರಿಯ ವಯಸ್ಸಿನ ಪ್ರತಾಪ್ ಸಿಂಹ, ಹಿರಿಯ ವಿ.‌ಶ್ರೀನಿವಾಸ್ ಪ್ರಸಾದ್ ಇದ್ದು, ಇಬ್ಬರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ 25 ಸ್ಥಾನವನ್ನು ಗೆದ್ದಿರುವ ಬಿಜೆಪಿ ಹೊಸ ದಾಖಲೆ ನಿರ್ಮಿಸಿದೆ. 2022ರ ಹೊರಗೆ ನರೇಂದ್ರ ಮೋದಿಯವರ ಕನಸಿನ‌ ಕೂಸಾದ ಆಶ್ರಯ ಯೋಜನೆಯಡಿ ಸ್ವಂತ ಸೂರನ್ನು ಪ್ರತಿಯೊಬ್ಬರಿಗು ಕಲ್ಪಿಸುವ ಉದ್ದೇಶವಿದೆ. ಈ‌ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯೊನ್ಮುಖರಾಗಬೇಕು ಎಂದರು.

ABOUT THE AUTHOR

...view details