ಮೈಸೂರು: ಅವಶ್ಯಕ ತರಕಾರಿ, ದಿನಸಿ ಸಿಗದೆ ಪರದಾಡುತ್ತಿದ್ದ ಗ್ರಾಮೀಣ ಹಾಗೂ ಕಾಡಂಚಿನ ಭಾಗದ ನಿವಾಸಿಗಳಿಗೆ ಪೊಲೀಸ್ ಸಿಬ್ಬಂದಿ ತಾವೇ ಗ್ರಾಮಗಳಿಗೆ ತೆರಳಿ ಆಹಾರ ಪೊಟ್ಟಣ, ದಿನಸಿ ಹಾಗೂ ತರಕಾರಿಗಳನ್ನು ವಿತರಿಸುತ್ತಿದ್ದಾರೆ.
ಮೈಸೂರು: ಕಾಡಂಚಿನ-ಗ್ರಾಮೀಣ ಭಾಗದ ಜನರಿಗೆ ಪೊಲೀಸರಿಂದ ಅಗತ್ಯ ವಸ್ತುಗಳ ವಿತರಣೆ
ಮೈಸೂರು ಜಿಲ್ಲೆಯ ಗ್ರಾಮಗಳು ಹಾಗೂ ಕಾಡಂಚಿನ ಪ್ರದೇಶಗಳಿಗೆ ಪೊಲೀಸರು ಸ್ವತಃ ಭೇಟಿ ನೀಡಿ ಆಹಾರ ಪೊಟ್ಟಣ, ದಿನಸಿ, ತರಕಾರಿಗಳನ್ನು ವಿತರಿಸುತ್ತಿದ್ದಾರೆ.
ಕಾಡಂಚಿನ, ಗ್ರಾಮೀಣ ಭಾಗದ ಜನರಿಗೆ ಖಾಕಿ ನೆರವಿ ಹಸ್ತ
ಇಲ್ಲಿನ ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ನಂಜನಗೂಡಿನ ಹಾಡಿ ಜನರಿಗೆ ಸ್ವತಃ ಪೊಲೀಸ್ ಸಿಬ್ಬಂದಿ ತೆರಳಿ ದಿನಸಿ ಕಿಟ್ಗಳನ್ನು ವಿತರಿಸುತ್ತಿದ್ದಾರೆ. ನಗರ ಹಾಗೂ ಪಟ್ಟಣದ ಪರಿಚಯವಿಲ್ಲದ ಕಾಡಂಚಿನ ಪ್ರದೇಶಗಳ ಜನರಿಗೂ ಆಹಾರ ಪದಾರ್ಥಗಳನ್ನು ಮುಟ್ಟಿಸುತ್ತಿದ್ದಾರೆ.
ಇದರ ಜೊತೆಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.