ಕರ್ನಾಟಕ

karnataka

ETV Bharat / state

ಮೈಸೂರಲ್ಲೂ ಉಗ್ರರ ದಾಳಿ ಸಂಚು.. ನಗರದಾದ್ಯಂತ ಪೊಲೀಸರಿಂದ ಹೈಅಲರ್ಟ್​

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ತಿಳಿದುಬಂದಿತ್ತು. ಇತ್ತ ಮುಂಬೈನಲ್ಲಿ 6 ಮಂದಿ ಶಂಕಿತ ಉಗ್ರರು ಬಂಧನವಾಗುತ್ತಿದ್ದಂತೆ ಅವರೆಲ್ಲಾ ದೇಶದ ಪ್ರಮುಖ ನಗರಗಳಲ್ಲಿ ದಾಳಿಗೆ ಸಂಚು ರೂಪಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆ ಮೈಸೂರಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

police-deployed-in-mysuru-in-wake-of-attack-treat-by-militants
ಮೈಸೂರಲ್ಲೂ ಉಗ್ರರಿಂದ ದಾಳಿಗೆ ಸಂಚು..ನಗರದಾದ್ಯಂತ ಪೊಲೀಸರಿಂದ ಕಟ್ಟೆಚ್ಚರ

By

Published : Sep 18, 2021, 11:18 AM IST

ಮೈಸೂರು: ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ಉಗ್ರರು ಸ್ಫೋಟದ ಸಂಚು ರೂಪಿಸಿದ್ದಾರೆ ಎಂಬ ಬಂಧಿತ ಉಗ್ರನ ಸುಳಿವು ಹಿನ್ನೆಲೆ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಪಾಕಿಸ್ತಾನದ ಐಎಸ್​​ಐ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ 6 ಮಂದಿ ಉಗ್ರರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.‌ ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮೈಸೂರು ಪೊಲೀಸರಿಗೆ ಹಾಗೂ ರಾಜ್ಯ ಗುಪ್ತಚರ ಸಿಬ್ಬಂದಿಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ನಗರದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ‌ನಿಯೋಜಿಸಲಾಗಿದ್ದು, ಗುಪ್ತಚರ ಅಧಿಕಾರಿಗಳು ಮಫ್ತಿಯಲ್ಲಿ ನಿಗಾ ಇಟ್ಟಿದ್ದಾರೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ವರದಿಯಾಗಿತ್ತು. ಆ ಬಗ್ಗೆಯೂ ಸಹ ಪೊಲೀಸರು ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಓದಿ:ದೆಹಲಿಯಲ್ಲಿ ಬಂಧಿತನಾಗಿದ್ದ ಉಗ್ರನ ಚಿಕ್ಕಪ್ಪ ಪ್ರಯಾಗ​ರಾಜ್​ನಲ್ಲಿ ಶರಣಾಗತಿ

ABOUT THE AUTHOR

...view details