ಕರ್ನಾಟಕ

karnataka

ETV Bharat / state

ಮೊಬೈಲ್‌ ಫೋನ್ ಕಳೆದು ಹೋದರೆ ಚಿಂತೆ ಬೇಡ: ಈ ರೀತಿ ಮಾಡಿದ್ರೆ ಫೋನ್​ ನಿಮ್ಮ ಕೈಗೆ!

ಕಳೆದು ಹೋದ ಮೊಬೈಲ್​ ಫೋನ್​ಗಳ ದುರ್ಬಳಕೆ ತಡೆಯಲು ಮೈಸೂರು ನಗರ ಪೊಲೀಸ್​ ಕಮಿಷನರ್ ರಮೇಶ್ ಬಾನೋತ್ ಸಾರ್ವಜನಿಕರಿಗೆ ಉಪಯುಕ್ತ ಸೂಚನೆಗಳನ್ನು ನೀಡಿದ್ದಾರೆ.

Etv Bharatpolice-commissioner-ramesh-banoth-give-public-notice-on-phone-lost
ಇನ್ಮುಂದೆ ಫೋನ್​ ಕಳೆದು ಹೋದರೆ ಚಿಂತೆ ಬೇಡ!: ಈ ರೀತಿ ಮಾಡಿದರೇ ನಿಮ್ಮ ಫೋನ್​ ಮತ್ತೆ ಸಿಗುತ್ತೆ..

By

Published : Apr 11, 2023, 4:03 PM IST

ಮೈಸೂರು:ಮೊಬೈಲ್​ ಫೋನ್​ಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ. ಬೆಳಗ್ಗೆದ್ದು ಫೋನ್ ನೋಡುವುದರಿಂದಲೇ ನಮ್ಮ ನಿತ್ಯದ ಜೀವನ ಪ್ರಾರಂಭವಾಗುತ್ತದೆ. ನಮ್ಮ ಫೋನ್​ನಲ್ಲಿ ಅತ್ಯಂತ ಗೌಪ್ಯ ಮಾಹಿತಿಯನ್ನೂ ಇಟ್ಟಿರುತ್ತೇವೆ. ಉದಾಹರಣೆಗೆ, ಬ್ಯಾಂಕ್​ ಖಾತೆ, ಸಾಮಾಜಿಕ ಮಾಧ್ಯಮಗಳ ಖಾತೆ ವಿವರಗಳನ್ನು ದಾಖಲಿಸಿರುತ್ತೇವೆ. ಇಂತಹ ಮೊಬೈಲ್​ ಫೋನ್​ ಕಳೆದು ಹೋದರೆ ಅಥವಾ ಕಳುವಾದರೆ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ.

ಅದಕ್ಕಾಗಿಯೇ ಸರ್ಕಾರ ಹೊಸ ಯೋಜನೆ ತಂದಿದೆ. ನಿಮ್ಮ ಫೋನ್ ಕಳೆದು ಹೋದಲ್ಲಿ, ಇಲ್ಲವೇ ಕಳುವಾದಲ್ಲಿ ಇನ್ನು ಮುಂದೆ ನೀವು ಚಿಂತಿಸಬೇಕಿಲ್ಲ. ಅದೂ ಕೂಡ ನಿಮ್ಮ ಮನೆಯಲ್ಲೇ ಕುಳಿತುಕೊಂಡು ನಿಮ್ಮ ಫೋನ್‌ಗಳನ್ನು ಟ್ರ್ಯಾಕ್ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಕಳೆದುಹೋದ ಮೊಬೈಲ್‌ಗಳು ಕೆಲವು ಅಪರಾಧ ಕೃತ್ಯಗಳಲ್ಲಿ ದುರ್ಬಳಕೆ ಆಗುತ್ತಿವೆ. ಅಮಾಯಕರು ತೊಂದರೆಗೆ ಸಿಲುಕುತ್ತಿದ್ದಾರೆ. ಇಂತಹ ತೊಂದರೆಗಳಿಂದ ಪಾರಾಗಲು ನಗರ ಪೊಲೀಸ್​ ಕಮಿಷನರ್ ರಮೇಶ್ ಬಾನೋತ್, ಪತ್ರಿಕಾ ಪ್ರಕಟಣೆಯ ಮೂಲಕ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

www.ceir.gov.in ವೆಬ್‌ಸೈಟ್ ಬಳಸಿ ಕಳೆದು ಹೋದ ಮೊಬೈಲ್ ದುರ್ಬಳಕೆ ತಡೆಯಬಹುದು. ಮೊಬೈಲ್ ಪತ್ತೆ ಕೂಡಾ ಮಾಡಬಹುದು.

1. ಮೊಬೈಲ್ ಫೋನ್ ಕಳೆದು ಹೋದಲ್ಲಿ ತಕ್ಷಣವೇ ksp application ನಲ್ಲಿ E-lost ದೂರು ಸಲ್ಲಿಸಿ, ಡಿಜಿಟಲ್ E-acknowledgement ಪಡೆದುಕೊಂಡು ಇಟ್ಟುಕೊಳ್ಳಬೇಕು.

2. ಕಳೆದುಕೊಂಡ ಸಿಮ್ ಕಾರ್ಡ್ ಅನ್ನು ಸಂಬಂಧಪಟ್ಟ ಸರ್ವೀಸ್ ಪ್ರೋವೈಡರ್‌ನಿಂದ ಮತ್ತೆ ಪಡೆದುಕೊಂಡು, ಒಟಿಪಿ ಪಡೆಯಲು ಸದರಿ ಸಿಮ್ ಕಾರ್ಡ್ ಚಾಲನೆಯಲ್ಲಿ ಇಟ್ಟುಕೊಳ್ಳುವುದು. CEIR portalನಲ್ಲಿ ಒಟಿಪಿ ಪಡೆಯಲು ಇದು ಅನುಕೂಲವಾಗುತ್ತದೆ.

3. www.ceir.gov.in website ಗೆ ಹೋಗಿ ತಮ್ಮ ಕಳೆದು ಹೋದ ಮೊಬೈಲ್ ಫೋನ್‌ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ಕಳೆದು ಹೋದ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡ ಆ ಮೊಬೈಲ್ ಫೋನ್ ದುರ್ಬಳಕೆ ಮಾಡಲು ಸಾಧ್ಯವಿಲ್ಲ.

4. ಅಲ್ಲದೇ www.ceir.gov.in ವೆಬ್‌ಸೈಟ್‌ನಲ್ಲಿ ಮೇಲ್ಕಂಡಂತೆ ಮಾಹಿತಿಯನ್ನು ನಮೂದಿಸುವುದರಿಂದ ಸಿಇಐಆರ್​ (ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೊಲೀಸ್​ ಠಾಣೆಯಿಂದ ಸದರಿ ಮೊಬೈಲ್ ಫೋನ್​ಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತದೆ.

5. ಕಳೆದು ಹೋದ ಮೊಬೈಲ್ ಫೋನ್ ಪತ್ತೆಯಾದರೆ ಈಗಾಗಲೇ ತಿಳಿಸಿರುವ CEIR portal ನಲ್ಲಿ ಲಾಗಿನ್ ಆಗಿ, ಅನ್ ಬ್ಲಾಕ್ ಮಾಡಿ ಸದರಿ ಮೊಬೈಲ್ ಫೋನ್ ಮತ್ತೆ ಬಳಸಬಹುದಾಗಿದೆ.

ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳನ್ನು ಮರಳಿ ಪಡೆಯಲು ಹಾಗೂ ಇಂತಹ ಮೊಬೈಲ್‌ಗಳು ಅಪರಾಧ ಕೃತ್ಯಗಳಲ್ಲಿ ದುರ್ಬಳಕೆಯಾಗುವುದನ್ನು ತಪ್ಪಿಸಲು, ಕಡ್ಡಾಯವಾಗಿ ಈ ಮೇಲಿನ ಸೂಚನೆಗಳನ್ನು ಪಾಲಿಸಬೇಕು ಎಂದು ಮೈಸೂರು ನಗರ ಪೊಲೀಸ್​ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಗೂಗಲ್ ಪೇ ತಾಂತ್ರಿಕ ದೋಷ: ಬಳಕೆದಾರರ ಖಾತೆಗೆ ಹಣ ಸಂದಾಯ!

ABOUT THE AUTHOR

...view details