ಕರ್ನಾಟಕ

karnataka

ETV Bharat / state

ಮೈಸೂರು ವಿವಿಯಲ್ಲಿ ಇಂದಿನಿಂದ ಪಿಹೆಚ್‌ಡಿ ಪರೀಕ್ಷೆ ಆರಂಭ

3 ವರ್ಷಗಳ ನಂತರ ಪಿಹೆಚ್‌ಡಿ ಪರೀಕ್ಷೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಿಹೆಚ್​​ಡಿ ಪರೀಕ್ಷೆಗೆ 10,938 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಆ ಪೈಕಿ 6,682 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 69 ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

PhD Examination begins today in Mysore university
ಮೈಸೂರು ವಿವಿಯಲ್ಲಿ ಇಂದಿನಿಂದ ಪಿಹೆಚ್‌ಡಿ ಪರೀಕ್ಷೆ ಆರಂಭ

By

Published : Nov 28, 2020, 12:50 PM IST

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಪಿಹೆಚ್‌ಡಿ ಪರೀಕ್ಷೆ ಆರಂಭವಾಗಿದ್ದು, ಮೂರು ದಿನಗಳ ಕಾಲ ಪರೀಕ್ಷೆ ನಡೆಯಲಿದೆ‌.

ಯುಜಿ, ಪಿ.ಜಿ ಮತ್ತು ಕೆ - ಸೆಟ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅದೇ ರೀತಿ 3 ವರ್ಷಗಳ ನಂತರ ಪಿಹೆಚ್‌ಡಿ ಪರೀಕ್ಷೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಿಹೆಚ್​​ಡಿ ಪರೀಕ್ಷೆಗೆ 10,938 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಆ ಪೈಕಿ 6,682 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 69 ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಮೈಸೂರು ವಿವಿ ಕುಲಸಚಿವ ಡಾ. ಕೆ.ಎಂ‌ ಮಹದೇವನ್

ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಗೆ ಅವಕಾಶ ನೀಡಿದ್ದರಿಂದ, ಅವರಿಗೆ ಇಚ್ಛೆ ಇರುವ ವಿಷಯಗಳ ಆಯ್ಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂರು ದಿನಗಳು ಪರೀಕ್ಷೆ ನಡೆಯಲಿದೆ.

ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಮೌಲ್ಯ ಭವನ ಮತ್ತು ಮಾನಸ ಗಂಗೋತ್ರಿಯ ವಿವಿಧ ವಿಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ. ಪರೀಕ್ಷಾ ಕೇಂದ್ರಗಳನ್ನ ಈಗಾಗಲೇ ಸ್ಯಾನಿಟೈಸ್ ಮಾಡಿದ್ದು, ಸರ್ವ ಸಿದ್ಧತೆ ಮಾಡಲಾಗಿದೆ.

ಇದನ್ನು ಓದಿ:ಚಳಿ ನಡುವೆ ಮಳೆಯ ಸಿಂಚನ: ಆತಂಕದಲ್ಲಿ ವಿಜಯಪುರ - ಧಾರವಾಡ ಜನತೆ

ಪರೀಕ್ಷೆಯ ಆರಂಭ ಮತ್ತು ಮುಕ್ತಾಯ ಎರಡೂ ಸಮಯದಲ್ಲಿ ಕೂಡ ಸ್ಯಾನಿಟೈಸ್ ಮಾಡಲಾಗುತ್ತದೆ. ಕೊರೊನಾ ಲಕ್ಷಣಗಳಿದ್ದರೆ, ಅಂತಹವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶವಿದೆ. ಈವರೆಗೂ ಕೊರೊನಾ ಲಕ್ಷಣ ಇರುವ ವಿದ್ಯಾರ್ಥಿಗಳು ಕಂಡುಬಂದಿಲ್ಲ ಎಂದು‌ ಮೈಸೂರು ವಿವಿ ಕುಲಸಚಿವ ಡಾ. ಕೆ.ಎಂ‌ ಮಹದೇವನ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details