ಮೈಸೂರು: ಕೊರೊನಾ ಸೋಂಕು ದಿನೆ ದಿನೇ ಉಲ್ಬಣಗೊಳ್ಳುತ್ತಿರುವುದರಿಂದ, ಕಾರ್ಖಾನೆ ಬಂದ್ ಮಾಡುವಂತೆ ಆದೇಶಿಸಿದ್ದರೂ ಗಾರ್ಮೆಂಟ್ಸ್ ಮಾಲೀಕ ಮಾತ್ರ ನೌಕರರನ್ನು ಕೆಲಸ ಬರುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಕಾರ್ಖಾನೆ ಬಂದ್ ಮಾಡುವಂತೆ ಆದೇಶಿಸಿದ್ದರೂ ಕ್ಯಾರೆ ಎನ್ನದ ಗಾರ್ಮೆಂಟ್ಸ್ ಮಾಲೀಕ
ಮೈಸೂರಿನಲ್ಲಿ ತಾಲೂಕು ಆಡಳಿತದ ಆದೇಶ ಮೀರಿ ಗಾರ್ಮೆಂಟ್ಸ್ ನಡೆಸುತ್ತಿರುವ ಮಾಲೀಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಬಂದ್ ಮಾಡುವಂತೆ ಆದೇಶ
ನರಸೀಪುರ ತಾಲೂಕಿನ ಚೌಹಳ್ಳಿ ಗ್ರಾಮದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ ಹಾಗೂ ಇತರೆ ಕಾರ್ಖಾನೆಯನ್ನ ಮೇ 5 ರಿಂದ ಮೇ 22ರ ತನಕ ಬಂದ್ ಮಾಡುವಂತೆ ತಾಲೂಕು ಆಡಳಿತ ಆದೇಶ ನೀಡಿದೆ. ಅಲ್ಲದೇ ಕಾರ್ಖಾನೆ ಮಾಲೀಕರಿಗೆ ನೋಟಿಸ್ ನೀಡಿದೆ. ನೋಟಿಸ್ ನೀಡಿದರು ಮಾಲೀಕರು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಎಂದಿನಂತೆ ಕಾರ್ಖಾನೆ ಕೆಲಸಕ್ಕೆ ನೌಕರರು ಹಾಜರಾಗುತ್ತಿದ್ದಾರೆ. ಸಾರ್ವಜನಿಕರ ವಿರೋಧದ ನಡುವೆಯು ಮಾಲೀಕ ಗಾರ್ಮೆಂಟ್ಸ್ ತೆರೆದಿದ್ದಾರೆ. ಗಾರ್ಮೆಂಟ್ಸ್ ಮಾಲೀಕನ ಮೊಂಡಾಟಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.