ಮೈಸೂರು: ಸೂಯೇಜ್ ಫಾರಂ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಮೋದಿಯ ಸ್ವಚ್ಛ ಭಾರತ್ ಯೋಜನೆಯ ವಿರೋಧಿಗಳು ಎಂದು ಸಂಸದ ಪ್ರತಾಪಸಿಂಹ ಶಾಸಕ ರಾಮದಾಸ್ ಅವರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸೂಯೇಜ್ ಫಾರಂ ವಿಚಾರದಲ್ಲಿ ಮತ್ತೆ ರಾಮದಾಸ್ ವಿರುದ್ಧ ಗುಡುಗಿದ್ದು, ದೀಪ ಹಚ್ಚಿದರೆ ವೈರಸ್ ಹೋಗುತ್ತೆ, ಗಾಳಿಯಲ್ಲಿ ದುರ್ವಾಸನೆ ಹೋಗುತ್ತೆ ಎಂದು ನಂಬಿಕೊಂಡು ಕೂರುವ ರಾಜಕಾರಣಿ ನಾನಲ್ಲ ಎಂದು ರಾಮದಾಸ್ ಹೇಳಿಕೆಯನ್ನೇ ವ್ಯಂಗ್ಯವಾಡಿದ್ದಾರೆ.
ಸೂಯೇಜ್ ಫಾರಂಗೆ ವಿರೋಧ: ರಾಮ್ದಾಸ್ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನಾನು ಸೂಯೇಜ್ ಫಾರಂ ವಿಚಾರದಲ್ಲಿ ಜನರಿಗೆ ಮಾತು ಕೊಟ್ಟಿದ್ದೆ. ರಾಮದಾಸ್ ಅವರು ಮಾಜಿಯಾಗಿದ್ದಾಗ ಅವರ ಪ್ರತಿಭಟನಾ ಸ್ಥಳಕ್ಕೆ ನಾನು ಭೇಟಿ ಕೊಟ್ಟಿದ್ದೆ. ಸೂಯೇಜ್ ಫಾರಂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೆ. ಅದಕ್ಕಾಗಿ ಸೋಮಣ್ಣ ಅವರ ಜೊತೆ ಸ್ಥಳ ಪರಿಶೀಲನೆ ಮಾಡಿದ್ದೆ. ಜನರ ಅಭಿಪ್ರಾಯ ಸಂಗ್ರಹಿಸಿದ್ದೆವು ಎಂದರು.
ಜನರು ಉಸ್ತುವಾರಿ ಸಚಿವರ ಬಳಿಯೇ ತಮ್ಮ ಸಲಹೆ ಸೂಚನೆ ನೀಡಿದ್ದರು. ಜನಾಭಿಪ್ರಾಯ ಸಂಗ್ರಹಿಸೋದು ಅಂದ್ರೆ ಏನು?ಯಾವುದಾದರೂ ಹೊಸ ಯೋಜನೆಗೆ ಜನಾಭಿಪ್ರಾಯ ಸಂಗ್ರಹಿಸುವುದು ನಿಯಮ. ಆದರೆ 35 ವರ್ಷದ ಸಮಸ್ಯೆಗೆ ಜನಾಭಿಪ್ರಾಯ ಸಂಗ್ರಹಿಸುವುದು ಬೇಕಾ. ಈ ವಿಚಾರ ಶಾಸಕ ಮಂತ್ರಿಯಾಗಿದ್ದ ರಾಮದಾಸ್ ಅವರಿಗೆ ಗೊತ್ತಿಲ್ವಾ? ಎಂದು ಪ್ರಶ್ನಿಸಿದರು.
ಒಬ್ಬ ಗ್ರಾಮಪಂಚಾಯಿತಿ ಸದಸ್ಯನಿಗೆ ಜನಾಭಿಪ್ರಾಯದ ಬಗ್ಗೆ ಗೊತ್ತಿದೆ ಅಂದ್ರೆ ರಾಮದಾಸ್ ಅವರಿಗೆ ಗೊತ್ತಿಲ್ಲವಾ?ಈ ಯೋಜನೆ ಸ್ವಚ್ಛಭಾರತ ಅಭಿಯಾನದ ಭಾಗ. ಈ ಯೋಜನೆಯನ್ನ ಮಾಡಿಯೇ ತಿರುತ್ತೇನೆ ಎಂದು ರಾಮ್ದಾಸ್ಗೆ ತಿರುಗೇಟು ನೀಡಿದ್ದಾರೆ.