ಕರ್ನಾಟಕ

karnataka

ETV Bharat / state

ಮತ್ತೊಂದು ಒಮಿಕ್ರಾನ್​ ಕೇಸ್​ ಪತ್ತೆ: ಮೈಸೂರು ವಿವಿಗೂ ಆವರಿಸಿದ ರೂಪಾಂತರಿ ಸೋಂಕು

Omicron cases in Karnataka: ಮೈಸೂರು ವಿವಿಯ ವಿದ್ಯಾರ್ಥಿನಿಗೆ ಒಮಿಕ್ರಾನ್​ ದೃಢಪಟ್ಟಿದೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 39 ಕ್ಕೆ ಏರಿದೆ.

ಮೈಸೂರು ವಿವಿಗೂ ಆವರಿಸಿದ ರೂಪಾಂತರಿ ಸೋಂಕು
ಮೈಸೂರು ವಿವಿಗೂ ಆವರಿಸಿದ ರೂಪಾಂತರಿ ಸೋಂಕು

By

Published : Dec 28, 2021, 6:12 PM IST

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಒಮಿಕ್ರಾನ್​ ಪ್ರಕರಣ ಪತ್ತೆಯಾಗಿದೆ. ಮೈಸೂರು ವಿಶ್ವಿವಿದ್ಯಾಲಯದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿನಿಯಲ್ಲಿ ಕೋವಿಡ್​ ರೂಪಾಂತರಿ ಸೋಂ​ಕು ದೃಢಪಟ್ಟಿದೆ. ಡಿಸೆಂಬರ್ 20 ರಂದು ಈಕೆ ತಾಂಜೇನಿಯಾ ಮೈಸೂರಿಗೆ ಬಂದಿದ್ದಳು ಎಂದು ತಿಳಿದುಬಂದಿದೆ.

ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್​ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆ ಆಗಿದೆ. ಜಿಲ್ಲಾಡಳಿತ ಆಕೆಯ ಸಂಪರ್ಕದಲ್ಲಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ. ಅಲ್ಲದೇ ಅವರನ್ನು ಪ್ರತ್ಯೇಕವಾಗಿರಿಸಿ, ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.

For All Latest Updates

TAGGED:

ABOUT THE AUTHOR

...view details