ಕರ್ನಾಟಕ

karnataka

ETV Bharat / state

ತಪ್ಪು ಮಾಡಿದ ವ್ಯಕ್ತಿ ಯಾವುದೇ ಜಾತಿಗೆ ಹುಟ್ಟಿರಲಿ, ತಪ್ಪು ತಪ್ಪೆ; 'ಡ್ರಗ್ಸ್ ಮಾಫಿಯಾ' ಬಗ್ಗೆ ತನ್ವೀರ್ ಸೇಠ್ ಏನಂದ್ರು ಗೊತ್ತಾ?

ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಸಿನಿಮಾ ವಲಯ, ಉದ್ಯಮಿ, ರಾಜಕಾರಣಿ ವರ್ಗದಲ್ಲಿ ಇದು ಹೆಚ್ಚಾಗಿ ಕೇಳಿಬರುತ್ತಿದೆ. ಆರೋಪ ಪ್ರತ್ಯಾರೋಪಗಳು ಸಾಮಾನ್ಯ. ತನಿಖೆಯಿಂದಷ್ಟೇ ಸತ್ಯ ಖಾತ್ರಿಯಾಗಬೇಕು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

mla-tanveer-seth
ಶಾಸಕ ತನ್ವೀರ್ ಸೇಠ್

By

Published : Sep 12, 2020, 8:11 PM IST

ಮೈಸೂರು: ಡ್ರಗ್ಸ್ ಮಾಫಿಯದಲ್ಲಿ ರಾಜಕೀಯ ಬೇಡ, ಯಾರೇ ಆಗಲಿ‌ ಅವರನ್ನು ರಾಜ್ಯ ಸರ್ಕಾರ ತಕ್ಷಣ ಬಂಧಿಸಬೇಕೆಂದು ಶಾಸಕ ತನ್ವೀರ್ ಸೇಠ್ ಒತ್ತಾಯ ಮಾಡಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ಬಂಧನಕ್ಕೆ ಬಿಜೆಪಿಯವರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಬೇಡ. ಅವರು ಯಾವ ಜಾತಿಗಾದರೂ ಹುಟ್ಟಿರಲಿ, ತಪ್ಪು ತಪ್ಪೆ. ಸಮಾಜದ ವಿರುದ್ಧ ನಡೆಯುವ ಕೃತ್ಯಗಳಿಗೆ ಕ್ಷಮೆ ಇಲ್ಲ. ಒಂದು ಬೆರಳು ಬೇರೆ ಕಡೆ ತೋರಿಸಿದ್ರೆ, ಮೂರು ಬೆರಳು ನಮ್ಮ ಕಡೆ ತೋರಿಸ್ತವೆ. ಹೀಗಾಗಿ ಸತ್ಯಶೋಧನೆಯನ್ನು ಪ್ರತಿಯೊಬ್ಬರು ಮಾಡಿಕೊಳ್ಳಲಿ‌ ಎಂದರು.

ಶಾಸಕ ತನ್ವೀರ್ ಸೇಠ್

ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಸಿನಿಮಾ ವಲಯ, ಉದ್ಯಮಿ, ರಾಜಕಾರಣಿ ವರ್ಗದಲ್ಲಿ ಇದು ಹೆಚ್ಚಾಗಿ ಕೇಳಿಬರುತ್ತಿದೆ. ಆರೋಪ ಪ್ರತ್ಯಾರೋಪಗಳು ಸಾಮಾನ್ಯ. ತನಿಖೆಯಿಂದಷ್ಟೇ ಸತ್ಯ ಖಾತ್ರಿಯಾಗಬೇಕು ಎಂದು ತಿಳಿಸಿದರು.

ಈ ಹಿಂದೆ ಗಾಂಜಾ ವಿಚಾರವಾಗಿ ಮೈಸೂರಿನಲ್ಲಿ, ತನ್ನದಲ್ಲದ ತಪ್ಪಿಗೆ ಪೊಲೀಸ್ ಅಧಿಕಾರಿಯೊಬ್ಬರು ಸಸ್ಪೆಂಡ್ ಆಗಿದ್ದರು. ಅವರಿಗೆ ಸೇರಿದ ನಾಲ್ಕು ಎಕರೆ ಜಮೀನು ಗುತ್ತಿಗೆಗೆ ಕೊಡಲಾಗಿತ್ತು. ಗುತ್ತಿಗೆ ಪಡೆದಿದ್ದ ವ್ಯಕ್ತಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ರು. ಆ ಕಾರಣಕ್ಕಾಗಿ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು ಎಂದು ನಡೆದ ಘಟನೆಯನ್ನು ವಿವರಿಸಿದರು. ಗಾಂಜಾ ವಿಚಾರದಲ್ಲಿ ರೈತರು ಎಚ್ಚರಿಕೆಯಿಂದಿರಬೇಕು, ಡ್ರಗ್ಸ್ ವಿಚಾರದಲ್ಲಿ ಸಮಗ್ರವಾದ ತನಿಖೆಯಾಗಬೇಕು. ಇದರ ಜವಾಬ್ದಾರಿ ಆಡಳಿತ ಪಕ್ಷದ್ದೇ ಆಗಿರುತ್ತದೆ ಎಂದರು.

ABOUT THE AUTHOR

...view details