ಕರ್ನಾಟಕ

karnataka

By

Published : Jan 17, 2022, 1:06 PM IST

ETV Bharat / state

ನಂಜುಂಡೇಶ್ವರ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ.. ಭಕ್ತಿಯಲ್ಲಿ ಮರೆಯಾಯ್ತು ಕೊರೊನಾ ರೂಲ್ಸ್!

ಹುಣ್ಣಿಮೆ ಪ್ರಯುಕ್ತ ನಂಜುಂಡೇಶ್ವರ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದಿದ್ದು, ಕೊರೊನಾ ನಿಯಮಗಳನ್ನು ಪಾಲಿಸದೇ ಭಕ್ತಾದಿಗಳು ಭಕ್ತಿಯಲ್ಲಿ ಮೈ ಮರೆಯುತ್ತಿರುವುದನ್ನು ಕಾಣಬಹುದಾಗಿದೆ.

No corona rules follow at Mysore, No corona rules follow devotees in Nanjundeshwara temple, Mysore corona rules break news, ಕೊರೊನಾ ನಿಯಮ ಪಾಲಿಸದ ಮೈಸೂರು ಜನ, ನಂಜುಂಡೇಶ್ವರ ದೇವಾಲಯದಲ್ಲಿ ಮರೆಯಾದ ಕೊರೊನಾ ನಿಯಮ, ಮೈಸೂರಿನಲ್ಲಿ ಕೊರೊನಾ ರೂಲ್ಸ್​ ಬ್ರೇಕ್​ ಸುದ್ದಿ,
ನಂಜುಂಡೇಶ್ವರ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

ಮೈಸೂರು:ಹುಣ್ಣಿಮೆ ದಿನದ ಹಿನ್ನೆಲೆ ನಂಜುಂಡೇಶ್ವರ ದರ್ಶನಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದರು. ಆದರೆ, ಹಲವು ಭಕ್ತಾದಿಗಳು ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ನಂಜುಂಡೇಶ್ವರ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

ವಾರಾಂತ್ಯ ಕರ್ಫ್ಯೂ ಹಿನ್ನೆಲೆ ದೇವಾಲಯಗಳಿಗೆ ತೆರಳಲು ಭಕ್ತಾದಿಗಳಿಗೆ ಆಗಿರಲಿಲ್ಲ. ಆದರೆ, ಹುಣ್ಣಿಮೆ ಹಾಗೂ ಸೋಮವಾರದ ಪ್ರಯುಕ್ತ ನಂಜನಗೂಡು ತಾಲೂಕಿನ ಐತಿಹಾಸಿಕ ನಂಜುಂಡೇಶ್ವರ ದರ್ಶನಕ್ಕೆ ಅಪಾರ ಭಕ್ತ ಸಮೂಹವೇ ಹರಿದು ಬಂದಿದೆ‌‌. ಈ ವೇಳೆ, ಹಲವು ಭಕ್ತಾದಿಗಳು ಕೊರೊನಾ ರೂಲ್ಸ್ ಮರೆತಿದ್ದಾರೆ.

ಓದಿ:Watch... ವ್ಹಿಲೀಂಗ್ ಮಾಡಿ ಲಾಂಗ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್.. ಆರೋಪಿ ಸೆರೆಗೆ ಖಾಕಿ ತೀವ್ರ ಶೋಧ!

ಮೈಸೂರಿನ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಈ ವಿಷಯವನ್ನು ತಿಳಿದರು ಕೂಡ ಕೊರೊನಾ ನಿಯಮ ಉಲ್ಲಂಘನೆ ಮಾಡುತ್ತಿರುವ ಭಕ್ತರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಕಪಿಲಾ ನದಿಯಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿದರು. ಈ ವೇಳೆ ಕೊರೊನಾ ರೂಲ್ಸ್ ಬ್ರೇಕ್ ಮಾಡಿರುವುದು ಬೆಳಕಿಗೆ ಬಂದಿದೆ. ಜನ ಹೀಗೆ ನಿರ್ಲಕ್ಷ್ಯ ವಹಿಸಿದರೆ ಕೊರೊನಾ ಸೋಂಕು ರಣಕೇಕೆ ಬೀರಲಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ABOUT THE AUTHOR

...view details