ಮೈಸೂರು:ಮದುವೆಯಾಗಿ 2ಮಕ್ಕಳಿರುವ ವ್ಯಕ್ತಿಯನ್ನು ಮದುವೆಯಾಗಿದ್ದ ಮಹಿಳೆ, ದಾಂಪತ್ಯ ಜೀವನಕ್ಕೆ ವರ್ಷ ತುಂಬುವ ಮುನ್ನವೇ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ತಾವರೆ ಕಟ್ಟೆ ಗ್ರಾಮದಲ್ಲಿ ನಡೆದಿದೆ.
ವಿಜಯಲಕ್ಷ್ಮಿ (25) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ತಿಳಿದು ಬಂದಿದೆ. "ನನ್ನ ಸಾವಿಗೆ ನನ್ನ ಪತಿಯ ಮೊದಲನೇ ಪತ್ನಿ ಹಾಗೂ ಆಕೆಯ ತಂಗಿಯೇ ಕಾರಣ" ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.