ಮೈಸೂರು:ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯದಲ್ಲಿ ಆಸ್ತಿ ಸರ್ವೇ ಕಾರ್ಯ ಆರಂಭವಾಗಿದ್ದು, ದೇವಾಲದ ಆಸ್ತಿ ಒತ್ತುವರಿ ಮಾಡಿಕೊಂಡವರಿಗೆ ಆತಂಕ ಶುರುವಾಗಿದೆ.
ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ ಆಸ್ತಿ ಸರ್ವೇ ಕಾರ್ಯ ಆರಂಭ ದಕ್ಷಿಣ ಕಾಶಿ ಶ್ರೀ ನಂಜುಂಡೇಶ್ವರ ದೇವಾಲಯಕ್ಕೆ ಸೇರಿದ ಆಸ್ತಿ ಸರ್ವೇ ಕಾರ್ಯ ಶುರುವಾಗಿದೆ. ದೇವಾಲಯದ ಸುತ್ತಮುತ್ತ ಹಾಗೂ ದೇವಾಲಯಕ್ಕೆ ಸೇರಿದ ಕೊಡುಗೆ ಜಮೀನುಗಳನ್ನು ಸರ್ವೇ ಮಾಡಲಾಗುತ್ತಿದೆ. ಹೀಗಾಗಿ ಅಕ್ರಮವಾಗಿ ದೇವಾಲಯಕ್ಕೆ ಸಂಬಂಧಿಸಿದ ಆಸ್ತಿ ಒತ್ತುವರಿ ಮಾಡಿಕೊಂಡವರಿಗೆ ಸರ್ವೇ ಬಿಸಿ ತಟ್ಟಿದೆ.
ಈ ಹಿಂದೆ 2011 ರಲ್ಲಿ ಇದೇ ಕಂದಾಯ ತಂಡ ಸರ್ವೇ ಕಾರ್ಯ ನಡೆಸಿತ್ತು. ಈಗ 2020ರಲ್ಲಿ ಮುಜರಾಯಿ, ಸರ್ವೇ ಇಲಾಖೆ, ಕಂದಾಯ ಹಾಗೂ ನಗರ ಸಭೆ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ, ಜಿಲ್ಲಾಧಿಕಾರಿಗಳ ಆದೇಶದಂತೆ ಈ ಸರ್ವೇ ನಡೆಯುತ್ತಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ದಾಖಲೆ ಪತ್ರಗಳಿಗೆ ರಿಜಿಸ್ಟರ್ ಮಾಡಿಸಿ ಅದನ್ನು ಸರ್ವೇ ಪತ್ರ ಎಂದು ಇಟ್ಟುಕೊಳ್ಳುತ್ತವೆ ಎಂದು ತಿಳಿಸಿದರು.