ಮೈಸೂರು: ನಂಜನಗೂಡಿನ ನಗರಸಭೆಯ ಮಹಿಳಾ ಲೆಕ್ಕಾಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 3 ದಿನಗಳ ಕಾಲ ನಗರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಮಹಿಳಾ ಲೆಕ್ಕಾಧಿಕಾರಿಗೆ ಕೊರೊನಾ: ನಂಜನಗೂಡಿನ ನಗರಸಭೆ ಸೀಲ್ ಡೌನ್ - Urban Council Seal Down
ಮಹಿಳಾ ಲೆಕ್ಕಾಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 3 ದಿನಗಳ ಕಾಲ ನಂಜನಗೂಡಿನ ನಗರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ನಂಜನಗೂಡಿನ ನಗರಸಭೆ ಸೀಲ್ ಡೌನ್
ಇವರ ಪತಿ ಜೆ.ಕೆ.ಟೈಯರ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದು, ಇವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ಮಹಿಳಾ ಲೆಕ್ಕಾಧಿಕಾರಿಗೆ ಪಾಸಿಟಿವ್ ಬಂದಿದೆ.
ಹಾಗಾಗಿ ನಂಜನಗೂಡಿನ ನಗರಸಭೆ ಕಚೇರಿ ಸ್ಯಾನಿಟೈಸ್ ಮಾಡಿ 3 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಪೌರಾಯುಕ್ತ ಕರಿಬಸವಯ್ಯ ತಿಳಿಸಿದ್ದಾರೆ.