ಮೈಸೂರು:ಜೂನ್ 8ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ತೆರೆಯಲಿರುವ ಹಿನ್ನೆಲೆ ದೇವಾಲಯದ ಸಿಬ್ಬಂದಿ ಹಾಗೂ ಅರ್ಚಕರ ಆರೋಗ್ಯ ತಪಾಸಣೆ ಮಾಡಲಾಯಿತು.
ಜೂ. 8ರಂದು ತೆರೆಯಲಿದೆ ನಂಜನಗೂಡು ದೇವಾಲಯ: ಅರ್ಚಕರು, ಸಿಬ್ಬಂದಿಯ ಆರೋಗ್ಯ ತಪಾಸಣೆ - Sri Kanteshwara Temple in Nanjangud
ಕೊರೊನಾ ಹಾಟ್ಸ್ಪಾಟ್ ಆಗಿದ್ದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಜೂನ್ 8ರಂದು ತೆರೆಯಲಾಗುತ್ತಿದೆ. ಈ ಹಿನ್ನೆಲೆ ದೇವಾಲಯದ ಸಿಬ್ಬಂದಿ ಹಾಗೂ ಅರ್ಚಕರ ಆರೋಗ್ಯ ತಪಾಸಣೆ ಮಾಡಲಾಯಿತು.
ಜೂ. 8ಕ್ಕೆ ತೆರೆಯಲಿದೆ ನಂಜನಗೂಡು ದೇವಾಲಯ: ಅರ್ಚಕರು, ಸಿಬ್ಬಂದಿ ಆರೋಗ್ಯ ತಪಾಸಣೆ
ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಕೊರೊನಾ ಹಾಟ್ಸ್ಪಾಟ್ ಆಗಿದ್ದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಜೂನ್ 8ರಂದು ತೆರೆಯಲಾಗುತ್ತಿದೆ. ಹಾಗಾಗಿ ತಾಲೂಕಿನ ಆರೋಗ್ಯ ಅಧಿಕಾರಿಗಳು ದೇವಾಲಯದ ದಾಸೋಹ ಭವನದಲ್ಲಿ ಅರ್ಚಕರು, ಸಿಬ್ಬಂದಿ ಮತ್ತು ಸೆಕ್ಯೂರಿಟಿ ಸೇರಿದಂತೆ 250ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿದರು.
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ತೆರೆಯುವ ಮೊದಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.