ಮೈಸೂರು: ಕಳೆದ ಎಂಟು ದಿನಗಳಿಂದ ಮಳೆಯಿಂದಾಗಿ ಹಾಗೂ ಕಬಿನಿ ಜಲಾಶಯದ ಹೊರ ಹರಿವಿನಿಂದ ನಲುಗಿದ್ದ ನಂಜನಗೂಡು ಸಹಜ ಸ್ಥಿತಿಗೆ ಬರುತ್ತಿದ್ದು, ನಂಜುಂಡೇಶ್ವರನ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬರುತ್ತಿದೆ.
ಸಹಜ ಸ್ಥಿತಿಗೆ ಮರಳಿದ ನಂಜನಗೂಡು... ನಂಜುಂಡೇಶ್ವರನ ಸನ್ನಿಧಿಯತ್ತ ಭಕ್ತರು - ಶ್ರೀಕಂಠೇಶ್ವರನ ದರ್ಶನ
ಕಳೆದ ಒಂದು ವಾರದಿಂದ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ನಂಜನಗೂಡು ಸಹಜ ಸ್ಥಿತಿಗೆ ಮರಳಿದೆ. ಶ್ರೀಕಂಠೇಶ್ವರನ ದರ್ಶನ ಪಡೆಯಲು ಕಾಯುತ್ತಿದ್ದ ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದೆ.
ಹೌದು, ಕಬಿನಿ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಬಿಟ್ಟ ಪರಿಣಾಮದಿಂದ ನಂಜನಗೂಡು ರಸ್ತೆಯಲ್ಲಿರುವ ಬಂಚಳ್ಳಿಹುಂಡಿಯಿಂದ ಮಲ್ಲನಮೂಲೆಯವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ದೇವಸ್ಥಾನದ ಸುತ್ತಮುತ್ತ ಕೂಡ ಮಳೆ ನೀರಿ ಆವರಿಸಿಕೊಂಡಿತ್ತು. ಆದರೀಗ ಕಬಿನಿ ಜಲಾಶಯದಿಂದ ಹೊರ ಹರಿವು ತಗ್ಗಿದ ಪರಿಣಾಮದಿಂದ ನಂಜನಗೂಡು ಸಹಜ ಸ್ಥಿತಿಗೆ ಮರಳಿದೆ. ಐದು ದಿನಗಳಿಂದ ನಂಜುಂಡೇಶ್ವರ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದೆ. ದೇವಸ್ಥಾನದ ಸುತ್ತಮುತ್ತಲಿನ ಅಂಗಡಿಗಳು ವ್ಯಾಪಾರಕ್ಕೆ ತೆರೆದುಕೊಂಡಿವೆ.