ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಅವಕಾಶವಿಲ್ಲ ಎಂದಿದ್ದಕ್ಕೆ ಬಿಜೆಪಿ ಸೇರಿದೆ: ಎನ್.ಮಹೇಶ್

ನಾನು ಮುಂದಿನ‌ ಚುನಾವಣೆ ದೃಷ್ಟಿಯಿಂದ ನನ್ನ ಕಾರ್ಯಕರ್ತರ ಒತ್ತಾಯದಂತೆ ಕಾಂಗ್ರೆಸ್ ಪಕ್ಷ ಸೇರಲು ಕೇಳಿದೆ. ಆದರೆ ಅವರು ನಮ್ಮಲ್ಲಿ ಅವಕಾಶವಿಲ್ಲ ಎಂದರು. ಹಾಗಾಗಿ ಈಗ ಬಿಜೆಪಿ‌ ಪಕ್ಷ ಸೇರಿದೆ ಎಂದು ಶಾಸಕ‌ ಎನ್.ಮಹೇಶ್ ತಿಳಿಸಿದರು.

By

Published : Aug 6, 2021, 2:18 PM IST

N. Mahesh
ಎನ್.ಮಹೇಶ್

ಮೈಸೂರು: ಕಾಂಗ್ರೆಸ್​ನಲ್ಲಿ ಅವಕಾಶ ಇಲ್ಲ ಎಂದು ಹೇಳಿದರು. ಹಾಗಾಗಿ ನನ್ನ ಮುಂದಿನ‌ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಸೇರಿದೆ ಎಂದು ಶಾಸಕ‌ ಎನ್.ಮಹೇಶ್ ಮೈಸೂರಿನಲ್ಲಿ‌ ಹೇಳಿದರು.

ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ‌ ನೀಡಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ‌ ಎನ್.ಮಹೇಶ್, ಬಿಜೆಪಿ ಸೇರ್ಪಡೆಯ ಬಗ್ಗೆ ಕಾರಣ ತಿಳಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ಹೈಕಮಾಂಡ್ ರಾಜೀನಾಮೆ ನೀಡಿ ಎಂದು ಹೇಳಿತು, ಆನಂತರ ರಾಜೀನಾಮೆ ನೀಡಿ ತಟಸ್ಥವಾಗಿದ್ದೆ. ಆದರೆ ಕುಮಾರಸ್ವಾಮಿ‌ ಸರ್ಕಾರ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ಪರವಾಗಿ ಮತ ಹಾಕಿ ಎಂದು ಹೇಳಿತ್ತು. ಆದರೆ ನಾನು ಮತ ಹಾಕುವುದರಿಂದ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ತಿಳಿಸಿದೆ.‌ ನನ್ನನ್ನು 5 ನಿಮಿಷದಲ್ಲೇ ಯಾವುದೇ ನೋಟಿಸ್ ನೀಡದೆ ಅಮಾನತು ಮಾಡಲಾಯಿತು. ಆ ನಂತರ ಶಾಸಕ ಸ್ಥಾನದಿಂದ ಅಮಾನತು ಮಾಡುವಂತೆ ಸ್ಪೀಕರ್​ಗೆ ಪತ್ರ ಬರೆದರು. ಆ ಪತ್ರ ಈಗಲೂ ರಮೇಶ್ ಕುಮಾರ್ ಬಳಿ ಇದೆ ಎಂದರು.

ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ‌ ಎನ್.ಮಹೇಶ್

ನಾನು ಮುಂದಿನ‌ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ದೃಷ್ಟಿಯಿಂದ ನನ್ನ ಕಾರ್ಯಕರ್ತರ ಒತ್ತಾಯದಂತೆ ಮುಂದಿನ‌ ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ಸೇರಲು ಕೇಳಿದೆ. ಆದರೆ ಅವರು ನಮ್ಮಲ್ಲಿ ಅವಕಾಶವಿಲ್ಲ ಎಂದರು. ಈಗ ಬಿಜೆಪಿ‌ ಪಕ್ಷ ಸೇರಿದೆ ಎಂದರು.

ಇಲ್ಲಿ ನಾನು ಪಕ್ಷ ಸೇರುವಾಗ ಸಚಿವನಾಗುವ ಬಗ್ಗೆ ಯಾವುದೇ ಕಂಡಿಷನ್ ಹಾಕಿಲ್ಲ.‌ ನನ್ನ ರಾಜಕೀಯ‌ ದೃಷ್ಟಿಯಿಂದ ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ‌ ಪಕ್ಷವನ್ನು ಸೇರಿದ್ದೇನೆ. ಇಲ್ಲಿಯೂ ಸಹ ನನ್ನ ಚಿಂತನೆ, ಅಲೋಚನೆ, ಬದ್ಧತೆಯನ್ನು‌ ಉಳಿಸಿಕೊಂಡು ಹೋಗುತ್ತೇನೆ. ಈ ಹಿಂದೆ ಬಿ.ಎಸ್.ಪಿ ಪಕ್ಷವೇ ನನ್ನ ತಾಯಿ ಎಂದು ಹೇಳಿದ್ದೆ. ಆದರೆ ತಾಯಿಯಿಂದಲೇ ಮಗನಿಗೆ ಮೋಸವಾಗಿದೆ. ಹಾಗಾಗಿ ಈಗ‌ ರಾಜಕೀಯವಾಗಿ ದಾರಿ ಕಂಡುಕೊಂಡೆ ಎಂದರು.

ABOUT THE AUTHOR

...view details