ಮೈಸೂರು: ಆ್ಯಂಬುಲೆನ್ಸ್ಗೆ ಜಾಗ ಬಿಡದೆ ಕಾರು ಚಾಲಕನೊಬ್ಬ ತೋರಿದ ದುರ್ವತನೆಗೆ ಮೈಸೂರು ಜಿಲ್ಲಾ ನ್ಯಾಯಾಲಯ ಕಾರು ಚಾಲನಿಗೆ 11ಸಾವಿರ ರೂ. ದಂಡ ವಿಧಿಸಿದೆ.
ಘಟನೆಯ ವಿವರ:ಚಿಕ್ಕಮಗಳೂರಿನ ಚಂದ್ರಶೇಖರ ಆಚಾರ್ಯ ಎಂಬ 85 ವರ್ಷದ ವೃದ್ಧರು ಕಾರು ಚಾಲಕನ ಜಗಳದಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು. ಆ. 22ರಂದು ವೃದ್ಧ ಚಂದ್ರಶೇಖರ ಅವರಿಗೆ ಚಿಕ್ಕಮಗಳೂರಿನ ತಮ್ಮ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿಗೆ ಆ್ಯಂಬುಲೆನ್ಸ್ನಲ್ಲಿ ರಾತ್ರಿ 8:30 ಗಂಟೆಗೆ ಹುಣಸೂರು ರಸ್ತೆಯ ಬೆಳವಾಡಿ ಗೇಟ್ ಬಳಿ ಬರುತ್ತಿದ್ದರು. ಆ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಮುಂದೆ ಹೋಗುತ್ತಿದ್ದ ಕಾರು ಅಡ್ಡವಿರುವುದರಿಂದ ಆ್ಯಂಬುಲೆನ್ಸ್ ಚಾಲಕ ಹಾರ್ನ್ ಮಾಡಿ ಸೈರನ್ ಹಾಕಿದರೂ ಕೂಡ ಕಾರಿನ ಚಾಲಕ ದಾರಿ ಬಿಡಲಿಲ್ಲ. ಹೂಟಗಳ್ಳಿಗೆ ಬರುವವರೆಗೂ ದಾರಿ ಬಿಡದೆ ಕಾರು ಚಾಲಕ ಮೊಂಡುತನ ತೋರಿದ್ದಾನೆ. ಆ್ಯಂಬುಲೆನ್ಸ್ ಚಾಲಕ ಕಿಶೋರ್ ಈ ವಿಚಾರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಕೆರಳಿದ ಕಾರು ಚಾಲಕ ವಾಗ್ವಾದಕ್ಕೆ ಇಳಿದು ಸುಮಾರು15 ನಿಮಿಷದವರೆಗೂ ಜಗಳವಾಡಿದ್ದಾನೆ. ಆ ಸಮಯದಲ್ಲಿ ಆ್ಯಂಬುಲೆನ್ಸ್ನಲ್ಲಿದ್ದ ವೃದ್ಧ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಸಾವನ್ನಪ್ಪಿದ್ದರು.