ಕರ್ನಾಟಕ

karnataka

ETV Bharat / state

ರೈತ ದಸರಾದಲ್ಲಿ ಹಾಲು ಕರೆಯುವ ಸ್ಪರ್ಧೆ; ವಿಜೇತರಿಗೆ ಸಿಗಲಿದೆ ಭಾರಿ ಮೊತ್ತದ ಬಹುಮಾನ

ರೈತ ದಸರಾದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಮೈಸೂರು ನಗರದ ಜೆ.ಕೆ ಮೈದಾನದಲ್ಲಿ ನಡೆಯಿತು.

mysore dasara 2023
ರೈತ ದಸರಾದಲ್ಲಿ ಹಾಲು ಕರೆಯುವ ಸ್ಪರ್ಧೆ; ವಿಜೇತರಿಗೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

By ETV Bharat Karnataka Team

Published : Oct 21, 2023, 2:59 PM IST

Updated : Oct 21, 2023, 3:10 PM IST

ರೈತ ದಸರಾದಲ್ಲಿ ಹಾಲು ಕರೆಯುವ ಸ್ಪರ್ಧೆ; ವಿಜೇತರಿಗೆ ಸಿಗಲಿದೆ ಭಾರಿ ಮೊತ್ತದ ಬಹುಮಾನ

ಮೈಸೂರು: ನಾಡಹಬ್ಬ ದಸರಾದ ರೈತ ದಸರಾದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ನಗರದ ಜೆ.ಕೆ ಮೈದಾನದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಐದು ಜಿಲ್ಲೆಗಳ 10 ಸ್ಪರ್ಧಿಗಳು ಭಾಗವಹಿಸಿ, ಬೆಳಗ್ಗೆ ದನದ ಹಾಲನ್ನು ಕರೆದರು. ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಕರೆದ ಹಾಲಿನ ತೂಕವನ್ನು ಪರಿಗಣಿಸಿ ಬಹುಮಾನ ನೀಡಲಾಗುತ್ತದೆ.

ನಾಡಹಬ್ಬ ದಸರಾ ಮಹೋತ್ಸವದ ನಿಮಿತ್ತ ವಿವಿಧ ಕಡೆ ವಿವಿಧ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ನಡೆಯುತ್ತಿದೆ. ನಗರದ ಜೆ.ಕೆ ಮೈದಾನದ ರೈತ ದಸರಾದಲ್ಲಿ ಇಂದು ಬೆಳಗ್ಗೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಐದು ಜಿಲ್ಲೆಗಳಿಂದ 10 ಸ್ಪರ್ಧಿಗಳು ಭಾಗವಹಿಸಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರು ಜಿಲ್ಲೆಯಿಂದ 10 ಜನ ರೈತರು ಇದ್ದರು. ಅದರಲ್ಲಿ ಬೆಳಗ್ಗೆ ಮೊದಲ ಹಂತದಲ್ಲಿ ಹಾಲು ಕರೆದ ಸ್ಪರ್ಧಿಗಳ ವಿವರ ಹೀಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಕುಮಾರ್ 11.970 ಕೆ.ಜಿ., ಮಂಡ್ಯದ ಗೋಪಾಲಕೃಷ್ಣ 18.750 ಕೆ.ಜಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮನ್ವಿತ್ ಗೌಡ 22.580 ಕೆ.ಜಿ, ನಂಜನಗೂಡಿನ ತಾಂಡವಪುರ ಗ್ರಾಮದ ಬಸವಯ್ಯ 16.540 ಕೆ.ಜಿ, ಮಂಡ್ಯ ಜಿಲ್ಲೆಯ ಶ್ರೀ ರಂಗಪಟ್ಟಣದ ಚಂದಗಾಲದ ವರದರಾಜು 10.900 ಕೆ.ಜಿ, ಬೆಂಗಳೂರು ಕಾಮಾಕ್ಷಿ ಪಾಳ್ಯದ ಗೀತಾ ಚೌಡಯ್ಯ 25.850 ಕೆ.ಜಿ, ಚಾಮರಾಜನಗರದ ಶಿವಮಲ್ಲಪ್ಪ 9.890 ಕೆ.ಜಿ, ಆನೆಕಲ್​ನ ಶ್ರೀನಿವಾಸ್ 18.930 ಕೆ.ಜಿ, ಮೈಸೂರಿನ ಸಾರವ್ ರವೀಂದ್ರ 17.830 ಕೆ.ಜಿ, ಬೆಂಗಳೂರಿನ ಯಧುನಂದನ್ 16.980 ಕೆ.ಜಿ ಹಾಲನ್ನು ಬೆಳಗ್ಗೆ ಕರೆದಿದ್ದಾರೆ.

ಇದನ್ನೂ ಓದಿ:ರಘು ದೀಕ್ಷಿತ್ - ಸಂಜಿತ್ ಹೆಗ್ಡೆ ಗಾನಸುಧೆ: ಕುಣಿದು ಕುಪ್ಪಳಿಸಿದ ಮೈಸೂರು ಜನತೆ

ಸಂಜೆ ಮತ್ತೊಂದು ಸುತ್ತು ಹಾಲು ಕರೆದು, ಅದರಲ್ಲಿ ಬೆಳಗ್ಗೆ ಮತ್ತು ಸಂಜೆ ಯಾರು ಹೆಚ್ಚು ಹಾಲು ಕರೆದಿದ್ದಾರೆ ಎಂದು ನೋಡಿ, ಅವರಿಗೆ ಮೊದಲ ಬಹುಮಾನ 50 ಸಾವಿರ ರೂ., ಎರಡನೇ 40 ಸಾವಿರ ರೂ., ಮೂರನೇ ಬಹುಮಾನ 30 ಸಾವಿರ ರೂ. ಹಾಗೂ ಸಮಾಧಾನಕರವಾಗಿ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಮೈಸೂರು ದಸರಾ ನಿಮಿತ್ತ 100 ವರ್ಷಕ್ಕೂ ಹಳೆಯದಾದ ವಿಂಟೇಜ್ ಕಾರುಗಳ ಪ್ರದರ್ಶನವನ್ನು ನಿನ್ನೆ (ಶುಕ್ರವಾರ) ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಏರ್ಪಡಿಸಲಾಗಿತ್ತು. ಸಂಸದ ಪ್ರತಾಪ್ ಸಿಂಹ ಪ್ರದರ್ಶನ ಉದ್ಘಾಟಿಸಿದ್ದರು. ಲ್ಯಾಂಡ್ ರೋವರ್, ಅಂಬಾಸಿಡರ್, ರೋಲ್ಸ್ ರಾಯ್ಸ್ ಸೇರಿದಂತೆ 40ಕ್ಕೂ ಹೆಚ್ಚು ವಿಂಟೇಜ್ ಕಾರುಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. 100 ವರ್ಷಕ್ಕೂ ಹಳೆಯದಾದ ಕಾರುಗಳನ್ನು ಕಂಡು ಪ್ರವಾಸಿಗರು ಪುಳಕಿತರಾದರು.

ಇದನ್ನೂ ಓದಿ:ದಸರಾ ವೈಭವದಲ್ಲಿ ವಿಂಟೇಜ್‌ 'ಕಾರ್‌'ಬಾರು: ವೈವಿಧ್ಯಮಯ ದೀಪಾಲಂಕಾರದಲ್ಲಿ ಮೂಡಿದ ನಾಡದೇವಿ, ಮಹರಾಜರು, ಸಂಸತ್ತು! Photos ನೋಡಿ

Last Updated : Oct 21, 2023, 3:10 PM IST

ABOUT THE AUTHOR

...view details