ಕರ್ನಾಟಕ

karnataka

ETV Bharat / state

ಚಾಮುಂಡೇಶ್ವರಿ ಮೊರೆಹೋದ ಮುರುಗೇಶ್ ನಿರಾಣಿ ಸಹೋದರ - ಸಚಿವ ಮುರಗೇಶ್​ ನಿರಾಣಿ ದೆಹಲಿ ಭೇಟಿ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಯಾಗ್ತಿದೆ. ಮುಂದಿನ ಸಿಎಂ ಪಟ್ಟಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೆಸರೂ ಸಹ ಕೇಳಿ ಬರುತ್ತಿದೆ. ಈ ಮಧ್ಯೆ ನಿರಾಣಿ ಸಹೋದರ ಹಣಮಂತ ನಿರಾಣಿ ಅವರು ಚಾಮುಂಡಿ ಬೆಟ್ಟಕ್ಕೆ ದೇವಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.

chamundi hills
ಹಣಮಂತ ನಿರಾಣಿ

By

Published : Jul 25, 2021, 4:44 PM IST

ಮೈಸೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ರೋಚಕ ಘಟ್ಟಕ್ಕೆ ತಲುಪಿದೆ. ಸಚಿವ ಮುರುಗೇಶ್ ನಿರಾಣಿ ದೆಹಲಿಯತ್ತ ಮುಖ ಮಾಡಿದರೆ, ಇತ್ತ ಸಹೋದರ ಹಣಮಂತ ನಿರಾಣಿ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ.

ಹಣಮಂತ ನಿರಾಣಿ ಹೇಳಿಕೆ

ಇದನ್ನೂ ಓದಿ:ನಾನು ಹೈಕಮಾಂಡ್​ ಹಾಕಿದ ಗೆರೆ ದಾಟುವುದಿಲ್ಲ: ಬಿ.ಎಸ್‌.ಯಡಿಯೂರಪ್ಪ

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ, ಈಗಾಗಲೇ ಹಲವರ ಹೆಸರು ರೇಸ್​ನಲ್ಲಿದ್ದು, ಸಚಿವ ಮುರಗೇಶ್​ ನಿರಾಣಿ ಹೆಸರು ಕೂಡ ಇದೆ‌. ಈ ಹಿನ್ನೆಲೆಯಲ್ಲಿ ಅಣ್ಣ ಮುರುಗೇಶ್ ನಿರಾಣಿ ಹೆಸರಿನಲ್ಲಿ,ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ವಿಶೇಷ ಅರ್ಚನೆ ಮಾಡಿಸಿದ್ದಾರೆ.

ಅಲ್ಲದೇ ನಂಜನಗೂಡಿನ ಸುತ್ತೂರು ಮಠಕ್ಕೂ ಹಣಮಂತ ನಿರಾಣಿ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಸಿಎಂ ಬದಲಾವಣೆ ಬಗ್ಗೆ ನಾವು ಮಾತನಾಡದೇ ಇರುವುದು ಒಳ್ಳೆಯದು: ಡಾ.ಕೆ.ಸುಧಾಕರ್

ABOUT THE AUTHOR

...view details