ಮೈಸೂರು: ನಗರದ ದೇವರಾಜ ಮಾರುಕಟ್ಟೆ ಬಳಿ ಅಕ್ಟೋಬರ್ 12 ರ ಬುಧವಾರ ರಾತ್ರಿ ಅಪರಿಚಿತ ಗುಂಪೊಂದು ಹಳೇ ಕಳ್ಳನೊಬ್ಬನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕುಂಬಾರ ಕೊಪ್ಪಲಿನ ನಿವಾಸಿ ಸುನಿಲ್ ಅಲಿಯಾಸ್ ದತ್ತು (25) ಕೊಲೆಯಾದ ವ್ಯಕ್ತಿ. ಈತ ಹಲವಾರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗ್ತಿದೆ.
ಮೈಸೂರು: ದೇವರಾಜ ಮಾರುಕಟ್ಟೆ ಬಳಿ ಮಾಜಿ ಕಳ್ಳನ ಭೀಕರ ಹತ್ಯೆ - ಕಳ್ಳನೊಬ್ಬನ ಹತ್ಯೆ
ಮೈಸೂರಿನ ದೇವರಾಜ ಮಾರುಕಟ್ಟೆ ಬಳಿ ಅಪರಿಚಿತ ಗುಂಪೊಂದು ಮಾಜಿ ಕಳ್ಳನೊಬ್ಬನ ಹತ್ಯೆ ಮಾಡಿದೆ. ಕೊಲೆಯಾದ ವ್ಯಕ್ತಿ ಹಲವಾರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗ್ತಿದೆ.
ಮೈಸೂರು
ಬುಧವಾರ ರಾತ್ರಿ ಮೈಸೂರಿನ ದೇವರಾಜ ಮಾರುಕಟ್ಟೆಯ ಬೋಟಿ ಬಜಾರ್ನ ಹೋಟೆಲ್ವೊಂದರ ಮುಂಭಾಗದಲ್ಲಿ ಗುಂಪೊಂದು ಆತನ ಮೇಲೆ ದಾಳಿ ನಡೆಸಿ, ಹತ್ಯೆ ಮಾಡಿ ಪರಾರಿಯಾಗಿದೆ. ಈ ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಮಂಡ್ಯ: ಟ್ಯೂಷನ್ಗೆ ಕರೆದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಸಂಪ್ಗೆ ಎಸೆದ ಕಿರಾತಕ