ಕರ್ನಾಟಕ

karnataka

ETV Bharat / state

ತಡೆಹಿಡಿದ ಅನುದಾನ ಬಿಡುಗಡೆಯಾಗುವವರೆಗೂ ಸಭೆಗೆ ಹಾಜರಾಗಲ್ಲ: ಸಾ.ರಾ.ಮಹೇಶ - sa.ra. mahesh wrote letter to govt

ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ಜಾರಿ ಮಾಡುವವರೆಗೂ ಯಾವುದೇ ಸಭೆಗೂ ಹಾಜರಾಗುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಬಹಿರಂಗ ಪತ್ರ ಬರೆದಿದ್ದಾರೆ.

mla sa.ra.mahesh
ಶಾಸಕ ಸಾ.ರಾ.ಮಹೇಶ್

By

Published : Jan 3, 2020, 5:51 PM IST

ಮೈಸೂರು: ಹಿಂದಿನ ಸಮ್ಮಿಶ್ರ ಸರ್ಕಾರ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದ ಅನುದಾನವನ್ನು ತಡೆಹಿಡಿಯಲಾಗಿದೆ. ಅದನ್ನು ಬಿಡುಗಡೆ ಮಾಡುವವರೆಗೂ ಉಸ್ತುವಾರಿ ಸಚಿವರ ಯಾವುದೇ ಸಭೆಗೆ ಭಾಗವಹಿಸುವುದಿಲ್ಲ ಎಂದು ಶಾಸಕ ಸಾ.ರಾ ಮಹೇಶ್ ಉಸ್ತುವಾರಿ ಸಚಿವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಶಾಸಕ ಸಾ.ರಾ.ಮಹೇಶ್

ಕೆ.ಆರ್.ನಗರ ಕ್ಷೇತ್ರಕ್ಕೆ ಗ್ರಾಮೀಣ ಅಭಿವೃದ್ಧಿಗೆ ₹ 7 ಕೋಟಿ, ಪೌರಾಡಳಿತ ಮತ್ತು ಲೋಕೋಪಯೋಗಿ ಇಲಾಖೆಗೆ ₹ 21.50 ಕೋಟಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 15 ಕೋಟಿ ಅನುದಾನವನ್ನು ಕಾಮಗಾರಿಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ತಡೆ ಹಿಡಿದಿದೆ ಎಂದುಬ ಆರೋಪಿಸಿದರು.

ಶಾಸಕ ಸಾ.ರಾ ಮಹೇಶ್ ದಸರಾ ಹಬ್ಬಕ್ಕೂ ಸಹ ಈ ಕಾರಣಕ್ಕಾಗಿಯೇ ಭಾಗವಹಿಸಿರಲಿಲ್ಲ. ಈಗ ಇಂದು ನಡೆದ ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಗೂ ಹಾಜರಾಗದೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ABOUT THE AUTHOR

...view details