ಮೈಸೂರು: ಜಲಾಶಯಗಳು ತುಂಬಿ ಹರಿದರೆ ಅವುಗಳ ಸಮೀಪದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಸೇತುವೆಗಳಿಗೆ ತಡೆಗೋಡೆ ನಿರ್ಮಿಸಿ ಉಂಟಾಗುವ ಪ್ರವಾಹವನ್ನು ತಡೆಯಬೇಕು ಎಂದು ಶಾಸಕ ಹರ್ಷವರ್ಧನ್ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಳಿ ಮನವಿ ಮಾಡಿದರು.
ಸೇತುವೆಗಳಿಗೆ ತಡೆಗೋಡೆ ನಿರ್ಮಿಸಿ, ಪ್ರವಾಹ ತಗ್ಗಿಸಿ: ಶಾಸಕ ಹರ್ಷವರ್ಧನ್ - ಮೈಸೂರಿನಲ್ಲಿ ಪ್ರವಾಹ
ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ, ನುಗು ಹಾಗೂ ತಾರಕ ಜಲಾಶಯಗಳು ತುಂಬಿ ಹರಿದರೆ, ಜಲಾಶಯಗಳು ಹಾಗೂ ನಾಲೆಗಳ ಸಮೀಪದಲ್ಲಿ ವಾಸಿಸುವ ಜನರಿಗೆ ಭಾರೀ ಅಪಾಯ ಎದುರಾಗುತ್ತದೆ ಎಂದು ಶಾಸಕ ಹರ್ಷವರ್ಧನ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹರ್ಷವರ್ಧನ್ ಮಾತನಾಡಿ, ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ, ನುಗು ಹಾಗೂ ತಾರಕ ಜಲಾಶಯಗಳು ತುಂಬಿ ಹರಿದರೆ, ಜಲಾಶಯಗಳು ಹಾಗೂ ನಾಲೆಗಳ ಸಮೀಪದಲ್ಲಿ ವಾಸಿಸುವ ಜನರಿಗೆ ಭಾರೀ ಅಪಾಯ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೂರು ಜಲಾಶಯಗಳು ತುಂಬಿ ಹರಿದಾಗ ನಂಜನಗೂಡಿಗೆ ಹೆಚ್ಚಿನ ಅಪಾಯ ಹಾಗೂ ಸೇತುವೆಗಳು ಮುಳುಗಿ ಹೋಗುವುದರಿಂದ ಅಲ್ಲಿ ವಾಸಿಸುವ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಹೀಗಾಗಿ,ಸೇತುವೆ ಬಳಿ ತಡೆಗೋಡೆ ನಿರ್ಮಿಸಿ ಪ್ರವಾಹದ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದಂತಾಗುತ್ತದೆ. ಜನರಿಗೆ ತೊಂದರೆಯೂ ಕಡಿಮೆಯಾಗಲಿದೆ. ಅದರ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಎಂದು ವಿನಂತಿಸಿದರು.