ಮೈಸೂರು: ನಂಜನಗೂಡಿನ ಬಿಜೆಪಿ ಅಧ್ಯಕ್ಷರಿಗೆ ಸೇರಿದ ಕಲ್ಯಾಣ ಮಟಂಪದಲ್ಲಿ ಜುಬಿಲಂಟ್ ಕಾರ್ಖಾನೆಗೆ ಸಂಬಂಧಿಸಿದ ಆಹಾರ ಕಿಟ್ ಪತ್ತೆಯಾದ ಬಗ್ಗೆ ಶಾಸಕ ಹರ್ಷವರ್ಧನ್ ಪ್ರತಿಕ್ರಿಯಿಸಿದ್ದಾರೆ.
ಕಲ್ಯಾಣ ಮಂಟಪದಲ್ಲಿ ಕಿಟ್ ಪತ್ತೆ ಬಗ್ಗೆ ಶಾಸಕ ಹರ್ಷವರ್ಧನ್ ಹೇಳಿದ್ದೇನು? - ಶಾಸಕ ಹರ್ಷವರ್ಧನ್ ಲೆಟೆಸ್ಟ್ ನ್ಯೂಸ್
ಜುಬಿಲಂಟ್ ಕಾರ್ಖಾನೆಗೆ ಸಂಬಂಧಿಸಿದ ಆಹಾರ ಕಿಟ್ ಪತ್ತೆಯಾದ ಬಗ್ಗೆ ಶಾಸಕ ಹರ್ಷವರ್ಧನ್ ಪ್ರತಿಕ್ರಿಯಿಸಿದ್ದಾರೆ. ನಂಜನಗೂಡಿನ ಬಿಜೆಪಿ ಅಧ್ಯಕ್ಷರ ಕಲ್ಯಾಣ ಮಂಟಪದಲ್ಲಿ ಎರಡು ಮೂರು ತಿಂಗಳಿನಿಂದ ಆಹಾರ ಕಿಟ್ ವಿತರಿಸಲು ಇಲ್ಲೇ ಗೋಡೌನ್ ಮಾಡಿಕೊಂಡಿದ್ದೇವೆ. ಜುಬಿಲಂಟ್ನಿಂದ ಬರುವ 200 ರಿಂದ 1000 ಕಿಟ್ಗಳನ್ನು ಈ ಕಲ್ಯಾಣ ಮಂಟಪದಲ್ಲಯೇ ಇಟ್ಟು ವಿತರಣೆ ಮಾಡುತ್ತೇವೆ ಎಂದಿದ್ದಾರೆ.
ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಎರಡು ಮೂರು ತಿಂಗಳಿನಿಂದ ಆಹಾರ ಕಿಟ್ ವಿತರಿಸಲು ಇಲ್ಲೇ ಗೋಡೌನ್ ಮಾಡಿಕೊಂಡಿದ್ದೇವೆ. ಜುಬಿಲಂಟ್ನಿಂದ ಬರುವ 200 ರಿಂದ 1000 ಕಿಟ್ಗಳನ್ನು ಈ ಕಲ್ಯಾಣ ಮಂಟಪದಲ್ಲಯೇ ಇಟ್ಟು ವಿತರಣೆ ಮಾಡುತ್ತೇವೆ. ಈಗಾಗಲೇ 3 ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಿಟ್ ವಿತರಿಸಿದ್ದು, ಇನ್ನೆರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಗೆ ಕಿಟ್ ವಿತರಿಸಬೇಕು. ಆನಂತರ ನಂಜನಗೂಡು ಪಟ್ಟಣಕ್ಕೆ ಕಿಟ್ ವಿತರಿಸುತ್ತೇವೆ. ಈ ಉದ್ದೇಶದಿಂದ ಜುಬಿಲಂಟ್ನಿಂದ ಬಂದ ಕಿಟ್ಗಳನ್ನು ಈ ಕಲ್ಯಾಣ ಮಂಟಪದಲ್ಲಿ ಇರಿಸಿದ್ದೇನೆ. ತಾಲೂಕು ಪಂಚಾಯತ್, ಮಿನಿ ವಿಧಾನಸೌಧ ಅಥವಾ ಸರ್ಕಾರಿ ಕಚೇರಿಯಲ್ಲಿ ಇಡಲು ಸರಿಯಲ್ಲ ಎಂಬ ಉದ್ದೇಶದಿಂದ ನಾನೇ ಈ ಕಲ್ಯಾಣ ಮಂಟಪದಲ್ಲಿ ಕಿಟ್ಗಳನ್ನು ಇರಿಸಿದ್ದೇನೆ. ಇದರಲ್ಲಿ ಅವ್ಯವಹಾರ ಏನು ಇಲ್ಲವೆಂದು ಶಾಸಕ ಹರ್ಷವರ್ಧನ್ ಸ್ಪಷ್ಟಪಡಿಸಿದ್ದಾರೆ.
ಜುಬಿಲಂಟ್ನಿಂದ ನಂಜನಗೂಡು ತಾಲೂಕಿಗೆ ಒಟ್ಟು 50,000 ಆಹಾರ ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ 5,000 ಕಿಟ್ಗಳನ್ನು ಮೈಸೂರಿನ ಆಶಾ ಕಾರ್ಯಕರ್ತರಿಗೆ ವಿತರಿಸಿದ್ದು, ಉಳಿದ ಕಿಟ್ಗಳನ್ನು ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 238 ಬೂತ್ಗಳಿಗೆ ಒಂದೊಂದು ಬೂತ್ಗೆ 200 ಕಿಟ್ ರೀತಿಯಲ್ಲಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು.