ಕರ್ನಾಟಕ

karnataka

By

Published : Feb 27, 2020, 7:09 PM IST

ETV Bharat / state

ಮೃಗಾಲಯದ ಪ್ರಾಣಿಗಳಿಗಳನ್ನ ಉಷ್ಣದಿಂದ ಪಾರು ಮಾಡಲು ನೀರು ಸಿಂಪರಣೆ: ನಿರ್ದೇಶಕ ಅಜಿತ್ ಕುಲಕರ್ಣಿ

ಮೃಗಾಲಯದಲ್ಲಿನ ಪ್ರಾಣಿಗಳಿಗಳನ್ನು ಉಷ್ಣದಿಂದ ಪಾರು ಮಾಡಿ ತಂಪಾಗಿಸಲು ಸ್ಪ್ರಿಂಕ್ಲರ್ ಮುಖಾಂತರ ನೀರು ಸಿಂಪರಣೆ ಮಾಡಲಾಗುತ್ತಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿದ್ದಾರೆ.

Sri Chamarajendra Zoo
ಶ್ರೀ ಚಾಮರಾಜೇಂದ್ರ ಮೃಗಾಲಯ

ಮೈಸೂರು:ಬೇಸಿಗೆ ಆರಂಭದಲ್ಲೇ ಬಿಸಿಲಿನ ಜಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿನ ಪ್ರಾಣಿಗಳನ್ನು ಉಷ್ಣದಿಂದ ಪಾರು ಮಾಡಿ ತಂಪಾಗಿಸಲು ಸ್ಪ್ರಿಂಕ್ಲರ್ ಮೂಲಕ ಸಿಂಪರಣೆ ಮಾಡಲಾಗುತ್ತಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿದ್ದಾರೆ.

ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಾಣಿಗಳ ಮೈ-ತಣಿಸಲು ಮೈಮೇಲೆ ನೀರು ಸಿಂಪರಣೆ ಮಾಡಲಾಗುತ್ತಿದೆ‌. ಬೇಸಿಗೆ ಬಿಸಿಲು ತುಸು ಜೋರಾಗಿಯೇ ಇರುವುದರಿಂದ ಪ್ರಾಣಿಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಸಿಂಪರಣೆ ಜೊತೆಗೆ ದ್ರವ ಆಹಾರ ನೀಡಲಾಗುತ್ತಿದೆ ಎಂದರು.

ಇನ್ನು ಕರಡಿಗಳಿಗೆ ಐಸ್‍ಬಾಕ್ಸ್​ನಲ್ಲಿ ಕಲ್ಲಂಗಡಿ ವಿತರಣೆ, ಚಿಂಪಾಜಿಗಳಿಗೆ ಎಳನೀರು ವಿತರಣೆ, ಹೀಗೆ ಎಲ್ಲ ಪ್ರಾಣಿಗಳಿಗೂ ನೀರಿನ ಅಂಶ ಇರುವ ಆಹಾರ ನೀಡಲಾಗುತ್ತಿದ್ದು, ಇನ್ನು ಈ ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ತುಂಟಾಟ ನೋಡ್ತಾ ಪ್ರವಾಸಿಗರು ಫುಲ್ ಖುಷ್ ಆಗುತ್ತಿದ್ದಾರೆ.

ABOUT THE AUTHOR

...view details