ಮೈಸೂರು:ಪಾರಂಪರಿಕ ಕಟ್ಟಡ ನವೀಕರಣ ಹಾಗೂ ಈಜುಕೊಳ ನಿರ್ಮಾಣ ಮಾಡಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ, ಪುರಾತತ್ವ ಇಲಾಖೆಯ ಆಯುಕ್ತರಿಗೆ ವರದಿಯ ಕ್ರಮವನ್ನು ಕೇಳಿ ಪತ್ರ ಬರೆದಿದ್ದಾರೆ.
ಮೈಸೂರು ಡಿಸಿ ಕಚೇರಿಯಲ್ಲಿ ಈಜುಕೊಳ ನಿರ್ಮಾಣ: ಪುರಾತತ್ವ ಇಲಾಖೆ ಆಯುಕ್ತರಿಗೆ ಪತ್ರ
ಪಾರಂಪರಿಕ ಕಟ್ಟಡ ನವೀಕರಣ ಹಾಗೂ ಈಜುಕೊಳ ನಿರ್ಮಾಣ ಮಾಡಿರುವ ಬಗ್ಗೆ ಬಂದ ದೂರಿನ ವರದಿ ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ, ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಮೈಸೂರು ಆಯುಕ್ತರಿಗೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಪತ್ರದ ಮೂಲಕ ತಿಳಿಸುವಂತೆ ಕೋರಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಪಾರಂಪರಿಕ ಕಟ್ಟಡವಾಗಿದ್ದು, ಅನುಮತಿ ಪಡೆಯದೇ ಕಟ್ಟಡ ನವೀಕರಣ, ಒಳಾಂಗಣ ಈಜುಕೊಳ ಹಾಗೂ ಜಿಮ್ ನಿರ್ಮಾಣದ ಕಾಮಗಾರಿಯನ್ನು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡೆಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ದೂರು ನೀಡಿದ್ದರು. ಈ ಸಂಬಂಧ ಯಾವ ರೀತಿಯ ಕ್ರಮ ಜರುಗಿಸಲಾಗಿದೆ? ಎಂಬ ಬಗ್ಗೆ ವರದಿ ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಮೈಸೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಮೈಸೂರು ಆಯುಕ್ತರಿಗೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಪತ್ರದ ಮೂಲಕ ತಿಳಿಸುವಂತೆ ಕೋರಿದ್ದಾರೆ.
ಇದನ್ನೂ ಓದಿ : ಅನ್ಲಾಕ್ 3 ಜಾರಿ: ಕರುನಾಡು ಸಂಪೂರ್ಣ ಓಪನ್; ಸಹಜ ಸ್ಥಿತಿಯತ್ತ ಬೆಂಗಳೂರು