ಮೈಸೂರು: ದಸರಾ ಮಹೋತ್ಸವ ಹಾಗೂ ಜಂಬೂಸವಾರಿ ಮೆರವಣಿಗೆ ನೋಡಲು ಮೈಸೂರಿಗೆ ಆಗಮಿಸಿದ ಪ್ರವಾಸಿಗರು, ಪ್ರವಾಸಿ ತಾಣಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟಿದ್ದು, ಅರಮನೆ ಹಾಗೂ ಮೃಗಾಲಯದ ಆದಾಯದಲ್ಲಿ ಏರಿಕೆ ಕಂಡಿದೆ. ಅರಮನೆಗೆ ಅಕ್ಬೋಬರ್ 9 ರಿಂದ ಅ. 23ರವರೆಗೆ ಒಟ್ಟು 15 ದಿನಗಳಲ್ಲಿ 1,67,065 ಜನರು ಭೇಟಿ ಕೊಟ್ಟಿದ್ದಾರೆ.
ಅ.9 ರಿಂದ ಅ.23ರವರೆಗೆ ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೀಗಿದೆ. ಅ.9ರಂದು 5,229 ಮಂದಿ (ಮಧ್ಯಾಹ್ನ 2ರಿಂದ ಸಂಜೆ 5.30ರವರಗೆ), ಅ.10 ರಂದು 6,714, ಅ.11ರಂದು 5,960, ಅ.12ರಂದು 7,675, ಅ.13 ರಂದು 9,253, ಅ.14ರಂದು 15,485, ಅ.15ರಂದು 12,513 (ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ), ಅ.16ರಂದು 9,958, ಅ.17ರಂದು 10,376, ಅ.18ರಂದು 10,622, ಅ.19ರಂದು 10,699, ಅ.20ರಂದು 12,345, ಅ.21ರಂದು 17,863, ಅ.22ರಂದು 21,560, ಅ.23ರಂದು 10,813 (ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ) ಸೇರಿದಂತೆ ಒಟ್ಟಾರೆ 1,67,065 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.
ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ:ಮೈಸೂರುಮೃಗಾಲಯಕ್ಕೂ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ದಸರಾ ಮಹೋತ್ಸವ ಉದ್ಘಾಟನೆಯ ಅ.15ರಿಂದ 24ರವರೆಗೆ 1,65,003 ಮಂದಿ ಬಂದು ಹೋಗಿದ್ದಾರೆ. ಅ.15ರಿಂದ 24ರವರೆಗೆ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಇಂತಿದೆ.
ಅ.15ರಂದು 16,600, ಅ.16ರಂದು 10,145, ಅ.17ರಂದು 8,599, ಅ.18ರಂದು 10,603, ಅ.19ರಂದು 11,098, ಅ.20ರಂದು 11,280, ಅ.21ರಂದು 16,875, ಅ.22ರಂದು 25,180, ಅ.23ರಂದು 28,287, ಅ.24ರಂದು 23,890 ಅಲ್ಲದೇ, 2,426 ಇತರೆ ಪ್ರವಾಸಿಗರು ಸೇರಿದಂತೆ ಒಟ್ಟಾರೆ 1,65,003 ಮಂದಿ ಆಗಮಿಸಿದ್ದಾರೆ.