ಮೈಸೂರು:ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ರಾಜವಂಶಸ್ಥರಾದ ಯದುವೀರ್ ದಂಪತಿ ಖುದ್ದು ತರಕಾರಿ ಖರೀದಿ ಮಾಡಿದ್ದಾರೆ.
ಖುದ್ದು ಮಾರುಕಟ್ಟೆಗೆ ತೆರಳಿ ತರಕಾರಿ ಖರೀದಿಸಿದ ಯದುವೀರ್ ದಂಪತಿ.. ವ್ಯಾಪಾರಿಗಳಿಗೆ ಸರ್ಪ್ರೈಸ್ - kannadanews
ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಹಾರಾಣಿಯವರೊಂದಿಗೆ ದೇವರಾಜ ಮಾರುಕಟ್ಟೆಗೆ ತೆರಳಿ ತರಕಾರಿ ಖರೀದಿಸಿದರು.
ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಮೈಸೂರು ಒಡೆಯರ್ ದಂಪತಿ
ಇಂದು ಮೈಸೂರಿನ ರಾಜ ಯದುವೀರ್ ಹಾಗೂ ಪತ್ನಿ ರಿಷಿಕಾ ಕುಮಾರಿ ಅವರು ಪಾರಂಪರಿಕ ಮಾರುಕಟ್ಟೆಯನ್ನು ಸುತ್ತುಹಾಕಿ ಖುದ್ದಾಗಿ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ ಹಾಗೂ ನಂಜನಗೂಡು ರಸಬಾಳೆಯನ್ನು ವ್ಯಾಪಾರ ಮಾಡಿ ವ್ಯಾಪಾರಿಗಳೊಂದಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದರು.ರಾಜವಂಶಸ್ಥರು ಮಾರುಕಟ್ಟೆಗೆ ಬಂದು ಖುದ್ದಾಗಿ ತರಕಾರಿ ಖರೀದಿ ಮಾಡಿದ್ದು ರಾಜ ಪರಂಪರೆಯಲ್ಲೇ ಇದೆ ಮೊದಲು ಎನ್ನಲಾಗಿದೆ.