ಕರ್ನಾಟಕ

karnataka

ETV Bharat / state

ಮುಖ್ಯಕಾರ್ಯದರ್ಶಿಯವರು ಶಿಲ್ಪನಾಗ್ ವಿಚಾರಣೆ ಮಾಡಿದ್ರೆ 'ಗೋ ಬ್ಯಾಕ್ ಚಳುಚಳಿ' ಮಾಡ್ತೇವೆ: ಪಾಲಿಕೆ ಸದಸ್ಯರು - Shilpa Nag resign

ಶಿಲ್ಪ ನಾಗ್ ಅವರ ರಾಜೀನಾಮೆಯನ್ನು ಸರ್ಕಾರ ತಿರಸ್ಕಾರ ಮಾಡಬೇಕು. ನಾಳೆ ಮುಖ್ಯ ಕಾರ್ಯದರ್ಶಿ ಮೈಸೂರಿಗೆ ಬರುತ್ತಿದ್ದಾರೆ‌. ಅವರು ಕೋವಿಡ್ ವಿಚಾರಕ್ಕೆ ಬಂದರೆ ಸ್ವಾಗತ ಕೋರುತ್ತೇವೆ. ಶಿಲ್ಪ ನಾಗ್ ಅವರನ್ನು ವಿಚಾರಣೆ ಮಾಡಲು ಬಂದರೆ ಗೋ ಬ್ಯಾಕ್ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು‌.

ಮೈಸೂರು ನಗರ ಪಾಲಿಕೆ
ಮೈಸೂರು ನಗರ ಪಾಲಿಕೆ

By

Published : Jun 5, 2021, 2:32 AM IST

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡೆಯಿಂದ ಬೇಸರಗೊಂಡು ರಾಜೀನಾಮೆ ಸಲ್ಲಿಸಿರುವ ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಪರ ನಗರಪಾಲಿಕೆ ಸದಸ್ಯರು ಒಂದಾಗಿ ಬೆಂಬಲ ಸೂಚಿಸಿದ್ದಾರೆ.

ಈ ಸಂಬಂಧ ನಗರಪಾಲಿಕೆ ಸಭಾಂಗಣದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸದಸ್ಯರು, ಶಿಲ್ಪ ನಾಗ್ ಅವರ ರಾಜೀನಾಮೆಯನ್ನು ಸರ್ಕಾರ ತಿರಸ್ಕಾರ ಮಾಡಬೇಕು. ನಾಳೆ ಮುಖ್ಯ ಕಾರ್ಯದರ್ಶಿ ಮೈಸೂರಿಗೆ ಬರುತ್ತಿದ್ದಾರೆ‌. ಅವರು ಕೋವಿಡ್ ವಿಚಾರಕ್ಕೆ ಬಂದರೆ ಸ್ವಾಗತ ಕೋರುತ್ತೇವೆ. ಶಿಲ್ಪ ನಾಗ್ ಅವರನ್ನು ವಿಚಾರಣೆ ಮಾಡಲು ಬಂದರೆ ಗೋ ಬ್ಯಾಕ್ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು‌.

ಶಿಲ್ಪಾ ನಾಗ್​ಗೆ ಪಾಲಿಕೆ ಸದಸ್ಯರ ಬೆಂಬಲ

ಪಕ್ಷಪಾತ ಬಿಟ್ಟು ವಿಚಾರಣೆ ನಡೆಸಬೇಕಾದರೆ, ಮೊದಲು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿ, ರೋಹಿಣಿ ಸಿಂಧೂರಿ ಅವರಿಂದ ಮೈಸೂರಿನಲ್ಲಿ ಸರಿಯಾಗಿ ಕೆಲಸವಾಗುತ್ತಿಲ್ಲ. ಅವರಿಂದ ಅಧಿಕಾರಿಗಳು ಮಾನಸಿಕವಾಗಿ ಕುಗ್ಗಿದ್ದಾರೆ. ಇಂತಹ ಅಧಿಕಾರಿ ಮೈಸೂರಿಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಲ್ಪಾನಾಗ್ ರಾಜೀನಾಮೆ ವಾಪಸ್ ಪಡೆಯುವವರೆಗೂ, ನಗರಪಾಲಿಕೆ ನೌಕರರು ಕೋವಿಡ್ ಕೆಲಸ ಮಾಡುವುದಿಲ್ಲ. ಅಧಿಕಾರಿಗಳು ಅಧಿಕಾರಿಗಳಂತೆ ವರ್ತಿಸಬೇಕು ರಾಜಕಾರಣಿಗಳಂತೆ ವರ್ತಿಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಓದಿ:ಇದು ದುರಹಂಕಾರಿ ಅಧಿಕಾರಿಯ‌ ವಿರುದ್ದ ಪ್ರತಿಭಟನೆಯ ಸಂಕೇತ: ಕಣ್ಣೀರಲ್ಲೇ ರಾಜೀನಾಮೆ ನೀಡಿದ ಆಯುಕ್ತೆ ಶಿಲ್ಪಾ ನಾಗ್​​​

ABOUT THE AUTHOR

...view details