ಮೈಸೂರು: ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ ನನಗೆ ಮಸಿ ಬಳಿಯುವುದಾಗಿ ಕೆಲವರು ಹೇಳಿದ್ದರು. ಮಸಿ ಬಳಿಯುವುದಲ್ಲ, ಕೊಲೆ ಮಾಡಿದ್ರೂ ನನ್ನ ಹೋರಾಟ ನಿಲ್ಲಲ್ಲ. ಕನ್ನಡ ಹೋರಾಟ, ಜನಸಾಮಾನ್ಯರ ಹೋರಾಟಕ್ಕೆ ನಾನು ಬಂದೇ ಬರುತ್ತೇನೆ. ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಪತ್ರಕರ್ತ, ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಟಾಂಗ್ ನೀಡಿದ್ದಾರೆ.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಸಹೋದರಿ ಗೌರಿ ಲಂಕೇಶ್ ಹೋರಾಟ ಮಾಡುತ್ತಲೇ ಕೊಲೆಯಾಗಿ ಹೋದಳು.
ನಾನು ಸಹ ಹೋರಾಟ ಮಾಡಿಕೊಂಡು ಬಂದವನು. ನನಗೆ ಮಸಿ ಬಳಿಯುವುದಿರಲಿ, ಕೊಲೆ ಮಾಡುತ್ತೇನೆಂದು ಬೆದರಿಸಿದರೂ ಹೆದರುವುದಿಲ್ಲ. ಹಾಗಾಗಿಯೇ, ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಂಡಿದ್ದೇನೆ ಎಂದರು.
ನಾನು ಅನ್ಯಾಯದ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದವನು. ರಾಜ್ಯದ ಯಾವುದೇ ಭಾಗದಲ್ಲಿ ಅನ್ಯಾಯವಾದರೂ ಹೋಗಿ ಹೋರಾಟ ಮಾಡಿದ್ದೇನೆ. ಕೋಮುವಾದದ ವಿರುದ್ಧ ಹೋರಾಡುತ್ತಿದ್ದೇನೆ. ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿದ್ದೇನೆ. ಕೊರೊನಾದಿಂದ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.