ಕರ್ನಾಟಕ

karnataka

ETV Bharat / state

ಹರ್ಷವರ್ಧನ್​​ ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಶ್ರೀನಿವಾಸ್​​ ಪ್ರಸಾದ್​​​​ ಸ್ಪಷ್ಟನೆ - ನಮ್ಮ ನಡೆಗೆ ಸಮಾನತೆ ಕಡೆಗೆ ಕಾರ್ಯಕ್ರಮ

ನನ್ನ ಅಳಿಯ ಹರ್ಷವರ್ಧನ್  ಇದೇ ಮೊದಲ ಬಾರಿಗೆ ನಂಜನಗೂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ‌. ಮೊದಲು ಕ್ಷೇತ್ರದ ಕೆಲಸ ಮಾಡಲಿ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿ.‌ ಈಗಲೇ ಸಚಿವ ಸ್ಥಾನ ಕೇಳುವುದು ತಪ್ಪು ಎಂದರು.

ಶ್ರೀನಿವಾಸ್ ಪ್ರಸಾದ್

By

Published : Aug 6, 2019, 1:52 PM IST

ಮೈಸೂರು: ರಾಜ್ಯ ಸಚಿವ ಸಂಪುಟ ರಚನೆಯಾದರೆ ಮೈಸೂರು ಭಾಗದಿಂದ ಬಿಜೆಪಿ ಶಾಸಕ ಹರ್ಷವರ್ಧನ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳಲ್ಲಿ ನಿರೀಕ್ಷೆ ಇತ್ತು. ಆದರೆ ಈ ಬಗ್ಗೆಸಂಸದ ಶ್ರೀನಿವಾಸ್ ಪ್ರಸಾದ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಶ್ರೀನಿವಾಸ್ ಪ್ರಸಾದ್ ಅವರ 73ನೇ ಹುಟ್ಟುಹಬ್ಬ ಅಂಗವಾಗಿ 'ನಮ್ಮ ನಡಿಗೆ ಸಮಾನತೆ ಕಡೆಗೆ' ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಅಳಿಯ ಹರ್ಷವರ್ಧನ್ ಇದೇ ಮೊದಲ ಬಾರಿಗೆ ನಂಜನಗೂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ‌. ಮೊದಲು ಕ್ಷೇತ್ರದ ಕೆಲಸ ಮಾಡಲಿ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿ.‌ ಈಗಲೇ ಸಚಿವ ಸ್ಥಾನ ಕೇಳುವುದು ತಪ್ಪು ಎಂದರು.

ಶ್ರೀನಿವಾಸ್ ಪ್ರಸಾದ್, ಸಂಸದ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟ ರಚನೆ ಮಾಡುತ್ತಾರೆ ಎಂದರು. ಇದೇ ವೇಳೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದು ಮಾಡಿ ಕೇಂದ್ರ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ ಎಂದರು.

ABOUT THE AUTHOR

...view details