ಮೈಸೂರು: ಲಾಕ್ಡೌನ್ನಲ್ಲಿ ಹೆಚ್ಚಾಗಿದ್ದ ದಿನಬಳಕೆ ವಸ್ತುಗಳ ಬೆಲೆ ಅನ್ಲಾಕ್ನಲ್ಲಿ ಸಾಮಾನ್ಯ ದರಕ್ಕೆ ಇಳಿದಿದೆ. ಸಗಟು ಮಾರುಕಟ್ಟೆಯಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಒಂದು ಕೆ.ಜಿಗೆ 50 ರೂಪಾಯಿ ಇದ್ದ ಅಕ್ಕಿ ಬೆಲೆ 100 ಆಗಿತ್ತು.
ಸಹಜ ಸ್ಥಿತಿಯತ್ತ ಅಗತ್ಯ ವಸ್ತುಗಳ ಬೆಲೆ... ಖುಷಿಯಾಗಿದ್ದಾನಾ ಜನಸಾಮಾನ್ಯ? - ಮೈಸೂರು ಜಿಲ್ಲೆ ಸುದ್ದಿ
ಮೈಸೂರು ಜಿಲ್ಲೆಯಲ್ಲಿ ದಿನಸಿ ಹಾಗೂ ತರಕಾರಿ ವ್ಯಾಪಾರಿಗಳು ಲಾಕ್ಡೌನ್ ಅವಧಿಯನ್ನು ಬಂಡವಾಳ ಮಾಡಿಕೊಂಡು ಜನರ ಬಳಿ ಹಗಲು ದರೋಡೆ ಮಾಡಿದ್ದರು. ಸದ್ಯ ಎಲ್ಲವೂ ನಿಯಂತ್ರಣಕ್ಕೆ ಬಂದಿದ್ದು, ಅಗತ್ಯ ವಸ್ತುಗಳ ಬೆಲೆಯಲ್ಲಿ ಯಾವುದೇ ಹೆಚ್ಚಳ ಕಂಡಿಲ್ಲ.
ಮೈಸೂರು ನಗರ
ಕೊರೊನಾದಿಂದ ಜನರ ಜೀವನ ದುಸ್ತರವಾಗಿದೆ. ಹೀಗಾಗಿ, ಜನರ ಕೈಯಲ್ಲಿ ದುಡ್ಡು ಓಡಾಡಿಲ್ಲ. ಅದಲ್ಲದೇ, ನಾವು ಕೂಡ ಸರುಕುಗಳ ಪೂರೈಕೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದೆವು. ಹೀಗಾಗಿ ಸಾರಿಗೆ ವೆಚ್ಚವನ್ನು ಗ್ರಾಹಕರ ಮೇಲೆ ಹಾಕುತ್ತಿದ್ದೆವು. ಸದ್ಯ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ವಸ್ತುಗಳ ಬೆಲೆ ಏರಿಸಿಲ್ಲ ಎಂದು ಸಂತೆಪೇಟೆಯ ಸಗಟು ವ್ಯಾಪಾರಿ ಹಿಜಾಜ್ ಪಾಷಾ ಹೇಳಿದರು.