ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ನಡೆದ ಸುತ್ತೂರು ರಥೋತ್ಸವ - ಸುತ್ತೂರು ಜಾತ್ರಾ ಮಹೋತ್ಸವ

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದ ಮೂರನೇ ದಿನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು.

Grand  celebration ofsuttur  Rathotsavam
ಅದ್ಧೂರಿಯಾಗಿ ನಡೆದ ಸುತ್ತೂರು ರಥೋತ್ಸವ

By

Published : Jan 23, 2020, 12:26 PM IST

ಮೈಸೂರು:ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದ ಮೂರನೇ ದಿನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು.

ಅದ್ಧೂರಿಯಾಗಿ ನಡೆದ ಸುತ್ತೂರು ರಥೋತ್ಸವ

ಸುತ್ತೂರು ಮಠದ ಕತೃ ಗದ್ದುಗೆ ಮುಂಭಾಗದಿಂದ ರಥೋತ್ಸವಕ್ಕೆ ಸುತ್ತೂರು ಮಠದ ಪೀಠಾಧಿಪತಿ ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ, ವಿವಿಧ ಮಠಗಳ ಮಠಾಧೀಶರು‌, ಮಾಜಿ‌ ಸಂಸದ ಆರ್.ಧ್ರುವನಾರಾಯಣ್​ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಚಾಲನೆ ಸಿಕ್ಕಿತು.


ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಹಣ್ಣು ಎಸೆದು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಕೃಪೆಗೆ ಪಾತ್ರರಾದರು. ಕತೃ ಗದ್ದುಗೆ ಮುಂಭಾಗದಿಂದ ಹೊರಟ ರಥ ಪ್ರಮುಖ ಬೀದಿಗಳ ಮೂಲಕ ತೆರಳಿತು.

ABOUT THE AUTHOR

...view details