ಮೈಸೂರು: ನಾನು ಹುಟ್ಟಿದ ಊರಿನಲ್ಲಿ ರಾಮ ಮಂದಿರ ಕಟ್ಟಿಸುತಿದ್ದೇನೆ. ಗ್ರಾಮದ ಜನರು ವಂತಿಗೆ ನೀಡುತ್ತಿದ್ದಾರೆ. ಇದರಲ್ಲಿ ಏನು ವಿಶೇಷ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ .
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಜನರು ರಾಮ ಮಂದಿರಕ್ಕೆ ದೇಣಿಗೆ ನೀಡುತ್ತಿದ್ದಾರೆಯೇ ಹೊರತು ಬಿಜೆಪಿಗೆ ಅಲ್ಲ. ಸಾರ್ವಜನಿಕರ ಹಣ ದೇಣಿಗೆ ಪಡೆದ ಮೇಲೆ ಲೆಕ್ಕ ಕೇಳುವ ಹಕ್ಕು ನಮಗೂ ಇರುತ್ತದೆ. ಹಿಂದೆ ದೇಣಿಗೆ ಸಂಗ್ರಹಿಸಿದ ಲೆಕ್ಕ ಕೊಟ್ಟಿಲ್ಲ, ಈ ಬಾರಿ ಲೆಕ್ಕವನ್ನು ಕೂಡಲೇಬೇಕು. ಸಾರ್ವಜನಿಕ ಹಣವಾಗಿದ್ದರಿಂದ ಲೆಕ್ಕ ಕೇಳುತ್ತಿದ್ದೇವೆ ಎಂದರು.
ನಾನು ಸಹ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಜನರು ತಮ್ಮ ತಮ್ಮ ಊರುಗಳಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದಾರೆ ಇದರಲ್ಲಿ ಏನು ವಿಶೇಷ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿತ್ತಿದ್ದಾರಲ್ಲ ಅದಕ್ಕೆ ಏನು ವಿಶೇಷ. ಇದು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.