ಮೈಸೂರು: ದಾಂಪತ್ಯ ಕಲಹದಿಂದ ರೈಲ್ವೆ ಪೊಲೀಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್. ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ದಾಂಪತ್ಯ ಕಲಹ: ನೇಣಿಗೆ ಶರಣಾದ ರೈಲ್ವೆ ಪೊಲೀಸ್ ಪೇದೆ - kannadanews
ದಾಂಪತ್ಯ ಕಲಹದಿಂದ ಮನನೊಂದು ರೈಲ್ವೆ ಪೊಲೀಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೋಪಿಕೃಷ್ಣ (35)ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪೇದೆ. ಇವರು ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರದ ಗ್ರಾಮದವರಾಗಿದ್ದು, ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಮದುವೆಯಾಗಿದ್ದರು. ಆದ್ರೆ ಪತ್ನಿ ಈತನ ಜೊತೆ ಸಂಸಾರ ನಡೆಸಲು ಇಷ್ಟವಿಲ್ಲ ಎಂದು ತವರು ಮನೆಗೆ ಹೋಗಿದ್ದರು ಎನ್ನಲಾಗಿದೆ. ವಾಪಸ್ ಬರುವಂತೆ ಎಷ್ಟೇ ಕರೆದರೂ ಮನೆಗೆ ಬಾರದ ಹಿನ್ನೆಲೆ ನೊಂದು ನಿನ್ನೆ ರಾತ್ರಿ ತಮ್ಮ ಜಮೀನಿನ ಮರದಲ್ಲಿ ನೇಣುಬಿಗಿದುಕೊಂಡು ಗೋಪಿಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮೃತನ ತಂದೆ ಸೊಸೆಯ ಕಿರುಕುಳದಿಂದ ನನ್ನ ಮಗ ಸಾವನಪ್ಪಿದ್ದಾನೆ ಎಂದು ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಕುಟುಂಬಸ್ಥರು ಹಾಗೂ ನನ್ನ ಮಗನ ಸಾವಿಗೆ ಕಾರಣರಾದ ಅವನ ಪತ್ನಿಯನ್ನು ಬಂಧಿಸಬೇಕು, ಸ್ಥಳಕ್ಕೆ ಸಚಿವ ಸಾ.ರಾ.ಮಹೇಶ್ ಆಗಮಿಸಬೇಕೆಂದು ಗ್ರಾಮಸ್ಥರು ಭೇರ್ಯದ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.ಸ್ಥಳದಲ್ಲಿ,ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು,ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.